ಮುಲ್ಕಿ: ಬೃಹತ್ ವಧೂ-ವರ "ಸಂಬಂಧ "ಕಾರ್ಯಕ್ರಮ; ಸಾವಿರಾರು ಮಂದಿ ಬಾಗಿ
Monday, October 28, 2024
ಮುಲ್ಕಿ: ಗೌಡ ಸಾರಸ್ವತ ಬ್ರಾಹ್ಮಣ ಸಂಸ್ಕೃತಿ ಸಂಸ್ಕಾರದ ಉಳಿವು ಹಾಗೂ ಅಭಿವೃದ್ಧಿಗಾಗಿ ಕುಲಗೋತ್ರ ಸಂಭದಿತ ವಿವಾಹ ಸಕಾಲದಲ್ಲಿ ಆಗುವುದು ಬಹಳ ಅಗತ್ಯ ಎಂದು ಅನಂತ ವೈದಿಕ ಕೇಂದ್ರದ ಮುಖ್ಯಸ್ಥ ವೇದಮೂರ್ತಿ ಚೆಂಪಿ ರಾಮಚಂದ್ರ ಭಟ್ ಹೇಳಿದರು.
ಮೂಲ್ಕಿ ಗೌಡ ಸಾರಸ್ವತ ಬ್ರಾಹ್ಮಣ ಸಭಾ ಆಶ್ರಯದಲ್ಲಿ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ನರಸಿಂಹ ಕೃಪಾ ಸಭಾಭವನದಲ್ಲಿ ಭಾನುವಾರ ನಡೆದ ಜಿಎಸ್‌ಬಿ ಸಮಾಜದ ವಧೂ-ವರರಿಗಾಗಿ ನಡೆದ ಸಂಭಂದ ಕಾರ್ಯಕ್ರಮವನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದರು.
ಮಕ್ಕಳಿಗೆ ಬಾಲ್ಯದಲ್ಲಿ ನೀಡುವ ಸಂಸ್ಕಾರ ಮುಂದೆ ಬೆಳೆದಂತೆ ಉದ್ಯೋಗ ವ್ಯವಹಾರಗಳ ಒತ್ತಡದಲ್ಲಿ ಹಾಗೂ ಮಹಾತ್ವಾಕಂಕ್ಷೆಯ ಬೆನ್ನುಹತ್ತುವ ವೇಗದಲ್ಲಿ ಹಿನ್ನಡೆಯಾಗುತ್ತದೆ ವಯಸ್ಸು ಬೆಳೆದಂತೆ ವಧೂವರ ಸಂಭಂದ ದೂರವಾಗುವ ಕಾರಣ ವಿದ್ಯೆ ಉದ್ಯೋಗ ವ್ಯವಹಾರದ ಜೊತೆಗೆ ಮನೆ ಹಿರಿಯರು ಹೇಳಿದಾಗ ಈ ಬಗ್ಗೆ ಗಮನ ಹರಿಸುವುದು ಬಹಳ ಉತ್ತಮ ಎಂದರು.
ಮುಲ್ಕಿ ಶ್ರೀ ವೆಂಕಟರಮಣ ದೇವಳದ ಟ್ರಸ್ಟಿ ಅತುಲ್ ಕುಡ್ವ ಮಾತನಾಡಿ,ಹಿರಿಯರು ಬೆಳೆಸಿ ಬಿಟ್ಟುಕೊಟ್ಟ ಸಂಸ್ಕೃತಿ ಸಂಸ್ಕಾರ ಉಳಿಯಬೇಕಾದಲ್ಲಿ ಸರಿಯಾದ ವೈವಾಹಿಕ ಪ್ರಕ್ರಿಯೆಗಳು ನಡೆಯಬೇಕು ಇದು ಹಿರಿಯರ ಕರ್ತವ್ಯದ ಜೊತೆಗೆ ಕಿರಿಯರು ಸೂಕ್ತವಾಗಿ ಅನುಸರಿಸಬೇಕಾದ ವಿಧಾನವಾಗಿದೆ ಈ ನಿಟ್ಟಿನಲ್ಲಿ ಜಿಎಸ್‌ಬಿ ಸಭಾ ಉತ್ತಮ ಕಾರ್ಯವನ್ನು ಮಾಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಎಸ್‌ಬಿ ಸಭಾ ಅಧ್ಯಕ್ಷ ಎಂ.ಸತ್ಯೇಂದ್ರ ಶೆಣೈ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಒಳಲಂಕೆ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಎಂಸೋಸಿಯೇಶನ್ ಅಧ್ಯಕ್ಷ ಸಂಪಿಗೆ ಮನೆ ಎಂ.ವಿಶ್ವನಾಥ ಭಟ್, ಜಿಎಸ್‌ಬಿ ಸಭಾ ಕಾರ್ಯದರ್ಶಿ ವಿಶ್ವನಾಥ ಶೆಣೈ, ಕೋಶಾಧಿಕಾರಿ ಪ್ರವೀಣ್ ಕಾಮತ್ ಉಪಸ್ಥಿತರಿದ್ದರು.
ವಿಶ್ವನಾಥ ಶೆಣೈ ಸ್ವಾಗತಿಸಿದರು. ನರಸಿಂಹ ಭಟ್ ನಿರೂಪಿಸಿದರು. ಎಂ. ಪಾಂಡುರಂಗ ಭಟ್ ವಂದಿಸಿದರು.
ಕಿಕ್ಕಿರಿದ ಜನಸ್ತೋಮ
ವಧೂವರರ ಸಂಭಂದಕ್ಕಾಗಿ ದೂರ ಊರುಗಳಿಂದ ಮುಂಜಾನೆಯೇ ಆಗಮಿಸಿದ ಜನರು ನಮ್ಮ ಮಕ್ಕಳೊಂದಿಗೆ ಸೂಮಾರು500 ಮೀ ಉದ್ದ ಸರತಿ ಸಾಲಿನಲ್ಲಿ ನಿಂತು ನೋಂದಾವಣೆ ಪ್ರಕ್ರಿಯೆ ಪೂರ್ಣಗೊಳಿಸಿದರು. ಶ್ರೀನರಸಿಂಹ ಕೃಪಾ ಸಭಾಭವನದ ಮೂರು ಅಂತಸ್ತುಗಳಲ್ಲಿ ಅವರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.ವಧೂವರ ಸಂಭಂದಕ್ಕಾಗಿ ದೂರದ ಊರುಗಳಿಂದ ಬಂದವರಿಗೆ ವಿಶೇಷ ಊಟ ಉಪಚಾರ ನೀಡಲಾಯಿತು.