ಮೂಲ್ಕಿ :ಚಿತ್ರಾಪುರ ಮಠ ದಲ್ಲಿ ಅಕ್ಟೊಬರ್ 27ರಂದು ನಡೆಯಲಿರುವ ಕೋಟಿ ಗಾಯತ್ರೀ ಜಪ ಯಜ್ಞದ ಪೂರ್ವ ಭಾವಿಯಾಗಿ ಶಿವಳ್ಳಿ ಸ್ಪಂದನ ಕಟೀಲು ವಲಯ ಅಷ್ಟಮಠಗಳಲ್ಲಿ ಹಮ್ಮುಕೊಂಡಿರುವ ವಲಯದ ಸರಣಿ ಜಪ ಸಪ್ತಾಹ ದ ಭಾಗ ವಾಗಿ ಪಂಜ ಲಕ್ಷ್ಮಿ ಶ್ರೀನಿವಾಸ ಮಠದಲ್ಲಿ ಗಾಯತ್ರೀ ಜಪ ಯಜ್ಞ ನಡೆಯಿತು.
ವೆಂಕಟೇಶ್ ಭಟ್ ಮತ್ತು ರತ್ನ ಭಟ್ ದಂಪತಿಗಳು ಫಲನ್ಯಾಸ ಮಾಡಿದರು, ಕುಲ್ಲಂಗಳ್ ಅನಂತ ಭಟ್ ಪ್ರಾರ್ಥನೆ ಮತ್ತು ಸುರಗಿರಿ ದೇವಸ್ಥಾನ ಮೊಕ್ತೇಸರಾದ ಅರವಿಂದ ಭಟ್ ಕುಡ್ಕೊಳ್ಳಿ ಯಾಗದ ಬಗ್ಗೆ ಮಾಹಿತಿ ನೀಡಿದರು. ವಿಷ್ಣು ಭಟ್ ಗಾಯತ್ರೀ ಜಪ, ವಿಷ್ಣು ಸಹಸ್ರ ನಾಮ ಪಾರಾಯಣ,ಸರ್ವ ಮಾಂಗಲ್ಯ ಮಂತ್ರ ದ ನಂತರ ಪ್ರಸನ್ನ ಪೂಜೆ ಮಾಡಿದರು ಹಾಗೂ ಹರಿ ಕೀರ್ತನೆ ಯೊಂದಿಗೆ ಕಾರ್ಯಕ್ರಮ ಸಂಪನ್ನ ವಾಯಿತು. ಪಾರ್ಥ ಸಾರಥಿ ಡಾ. ಗುರುರಾಜ ಉಡುಪ ಸಂತೋಷ್ ಕುಮಾರ್ ಕೈಯೂರು, ಭುವನೇಶ್, ಅನಿರುದ್ದ್, ಅಶೋಕ ರಾವ್,ಅಮೋಘ ಭಾಗವಹಿಸಿದ್ದರು.