ಪುನರೂರು,ತೋಕೂರು, ಕೆರೆಕಾಡು ವಲಯದ ವಿಪ್ರಸಂಪದದ ವತಿಯಿಂದ ಶಿಕ್ಷಣ ಕ್ಷೇತ್ರದ ಸಾಧಕರಿಗೆ ಗೌರವ ಕಾರ್ಯಕ್ರಮ
Monday, October 21, 2024
ಮುಲ್ಕಿ:ಪುನರೂರು,ತೋಕೂರು, ಕೆರೆಕಾಡು ವಲಯದ ವಿಪ್ರಸಂಪದದ ವತಿಯಿಂದ ಶಿಕ್ಷಣ ಕ್ಷೇತ್ರದ ಸಾಧಕರಿಗೆ ಗೌರವ ಕಾರ್ಯಕ್ರಮ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಪ್ರಸಂಪದದ ಅಧ್ಯಕ್ಷರಾದ ಸುಧಾಕರ ರಾವ್ ವಹಿಸಿದ್ದರು
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುಬ್ರಮಣ್ಯ ಕೊರಿಯಾರ್ ಮಾತನಾಡಿ ಉತ್ತಮ ಸಂಘಟನೆಯ ಮೂಲಕ ಸೇವಾ ಕಾರ್ಯಕ್ರಮಗಳನ್ನು ನಡೆಸಿದರೆ ಸಂಸ್ಥೆಯ ಉನ್ನತಿ ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಚಿತ್ರಾಪುರದಲ್ಲಿ ನಡೆಯಲಿರುವ ಕೋಟಿ ಗಾಯತ್ರಿ ಜಪ ಯಜ್ಞದ ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ಮಾತನಾಡಿ ಎಲ್ಲಾ ವಿಪ್ರ ಬಾಂಧವರು ಅ.26 ಮತ್ತು 27ರಂದು ಚಿತ್ರಾಪುರ ಮಠದ ಆವರಣದಲ್ಲಿ ನಡೆಯಲಿರುವ ಸಾಂಘಿಕ ಕೋಟಿ ಗಾಯತ್ರಿ ಜಪ ಯಜ್ಞದಲ್ಲಿ ತನು ಮನ ಧನದಿಂದ ಸಂಘಟನಾತ್ಮಕವಾಗಿ ಭಾಗವಹಿಸಿ ಯಶಸ್ವಿಗೊಳಿಸಲು ಮನವಿ ಮಾಡಿದರು
ವೇದಿಕೆಯಲ್ಲಿ ಯುಗಪುರುಷ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಹಿರಿಯರಾದ ಉದ್ಯಮಿ ಪಟೇಲ್ ರಾಮಮೂರ್ತಿ ರಾವ್, ಗೌರವಾಧ್ಯಕ್ಷ ಪಟೇಲ್ ವಾಸುದೇವ ರಾವ್, ಸ್ಥಾಪಕ ಅಧ್ಯಕ್ಷ ಸುರೇಶ್ ರಾವ್ ನೀರಳಿಕೆ, ಕಾರ್ಯದರ್ಶಿ ಚಂದ್ರಶೇಖರ್ ರಾವ್, ಕೋಶಾಧಿಕಾರಿ ಅವಿನಾಶ್ ರಾವ್,ಯುವ ವೇದಿಕೆ ಅಧ್ಯಕ್ಷ ಶಶಾಂಕ್ ಮುಚ್ಚಿಂತಾಯ,
ಮತ್ತಿತರರು ಉಪಸ್ಥಿತರಿದ್ದರು.
ಸುಧಾಕರ್ ರಾವ್ ಸ್ವಾಗತಿಸಿದರು
ಪ್ರಾಣೇಶ್ ಭಟ್ ದೇoದಡ್ಕ ನಿರೂಪಿಸಿದರು,ಶಶಾಂಕ್ ಮುಚ್ಚಿಂತಾಯ ಧನ್ಯವಾದ ಅರ್ಪಿಸಿದರು
ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಮಾರ್ ಅರ್ಚನಾ ರಾವ್ ಕೆರೆಕಾಡು ರವರನ್ನು ಗೌರವಿಸಲಾಯಿತು ಹಾಗೂ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಯಿತು.