ಬಪ್ಪನಾಡು ಲಯನ್ಸ್ ಕ್ಲಬ್ ಇನ್ಸ್ಪಾಯರ್ ವತಿಯಿಂದ ಪೌರ ಕಾರ್ಮಿಕರಿಗೆ ಸನ್ಮಾನ
Wednesday, October 2, 2024
ಮುಲ್ಕಿ: ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ಪ್ರಯುಕ್ತ ಬಪ್ಪನಾಡು ಲಯನ್ಸ್ ಕ್ಲಬ್ ಇನ್ಸ್ಪಾಯರ್ ವತಿಯಿಂದ ಸ್ವಚ್ಛತಾಸೇನಾನಿಗಳಾದ
ಮುಲ್ಕಿ ನಗರ ಪಂಚಾಯತ್ ಪೌರಕಾರ್ಮಿಕರನ್ನು ಗೌರವಿಸಲಾಯಿತು
ಈ ಸಂದರ್ಭ ಸೇವಾ ಸಂಸ್ಥೆಯ ಉಪಾಧ್ಯಕ್ಷ ಪುಷ್ಪರಾಜ ಚೌಟ ಮಾತನಾಡಿ ಪೌರ ಕಾರ್ಮಿಕರು ಊರಿನ ರಾಯಭಾರಿಗಳಾಗಿದ್ದು ಭಾರತದ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾನ್ ವ್ಯಕ್ತಿಗಳ ಜನ್ಮದಿನದಂದು ಶ್ರಮಿಕರಾದ ಪೌರ ಕಾರ್ಮಿಕರನ್ನು ಗುರುತಿಸಿ ಗೌರವಿಸುವುದು ಆದ್ಯ ಕರ್ತವ್ಯ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಪ್ಪನಾಡು ಲಯನ್ಸ್ ಕ್ಲಬ್ ಇನ್ಸ್ಪಾಯರ್ ನ ಅಧ್ಯಕ್ಷ ಬಿ ಶಿವಪ್ರಸಾದ್ ವಹಿಸಿದ್ದರು
ಈ ಸಂದರ್ಭ ಪತ್ರಿಕಾ ವಿತರಕ ಎಚ್ ರಮಾನಾಥ ಶೆಣೈ, ಸೇವಾ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಕಾರ್ಯದರ್ಶಿ ಪ್ರತಿಭಾ ಹೆಬ್ಬಾರ್, ಕೋಶಾಧಿಕಾರಿ ಅನಿಲ್ ಕುಮಾರ್, ಸದಸ್ಯರಾದ ಭಾಸ್ಕರ್ ಕಾಂಚನ್, ಕಲ್ಲಪ್ಪ ತಡವಲಗ, ವಿಶ್ವನಾಥ ಶೆಣೈ ಮತ್ತಿತರರು ಉಪಸ್ಥಿತರಿದ್ದರು