-->


ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯಲ್ಲಿ  ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ155 ನೇ ಜನ್ಮದಿನಾಚರಣೆ  ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ 120 ನೇ ಜನ್ಮದಿನ ಆಚರಣೆ ಕಾರ್ಯಕ್ರಮ

ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ155 ನೇ ಜನ್ಮದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ 120 ನೇ ಜನ್ಮದಿನ ಆಚರಣೆ ಕಾರ್ಯಕ್ರಮ



ಬಜಪೆ:ಭಾರತದ ಭವಿಷ್ಯದ  ವಿದ್ಯಾರ್ಥಿಗಳು ಪ್ರಸ್ತುತ ಜಗತ್ತಿನಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಈ ಸಂದರ್ಭದಲ್ಲಿ ಶಾಂತಿ ಸ್ಥಾಪನೆಗಾಗಿ ಪ್ರತಿಯೊಂದು ದೇಶಗಳು ಭಾರತ ದತ್ತ ನೋಡುತ್ತಾ ಇದೆ ಇದಕ್ಕೆ ಪ್ರಮುಖವಾದ ಕಾರಣ ಗಾಂಧೀಜಿಯ ಅಹಿಂಸಾ ತತ್ವ. ಅಹಿಂಸೆಯ ಮಹತ್ವವನ್ನು ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯ ಎಂದು  ಶಿಕ್ಷಕಿ ಶ್ರೀಮತಿ ಚಿತ್ರಾಶ್ರೀ ಕೆ.ಎಸ್. ಹೇಳಿದರು.ಅವರು ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ  ಕಾರ್ಯಕ್ರಮದಲ್ಲಿ 
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ155 ನೇ ಜನ್ಮದಿನಾಚರಣೆ  ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ 120 ನೇ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ  ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ  ಭಾವಚಿತ್ರಕ್ಕೆ  ಪುಷ್ಪನಮನವನ್ನು ಸಲ್ಲಿಸಲಾಯಿತು.

ಗಾಂಧೀಜಿಯವರ ಬಿಳಿ ಗಾಂಧಿ ಟೋಪಿಯನ್ನು ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಧರಿಸಿ ರಾಷ್ಟ್ರಧ್ವಜ ಹಾಗೂ ರಾಷ್ಟ್ರ ಪ್ರೇಮವನ್ನು ಸಾರುವ ಘೋಷಣಾ ವಾಕ್ಯಗಳನ್ನು ಘೋಷಿಸುತ್ತಾ  ಸುಮಾರು ಒಂದು ಕಿಲೋ ಮೀಟರ್ ವ್ಯಾಪ್ತಿಯ ಶಾಲೆಯ ಪರಿಸರದಲ್ಲಿ ಜಾಥಾವನ್ನು ನಡೆಸಿದರು. ವಿದ್ಯಾರ್ಥಿಗಳು ಅಹಿಂಸೆಯನ್ನು  ಪಾಲಿಸುವ ಬಗ್ಗೆ ಮತ್ತು ತಂಬಾಕು ಮತ್ತು ಮಾದಕ ವಸ್ತುಗಳಿಂದ ದೂರವಿರುವ ಕುರಿತಾದ ಪ್ರತಿಜ್ಞಾ ವಿಧಿಯನ್ನು ಕೈಗೊಳ್ಳಲಾಯಿತು.
 'ಗಾಂಧೀಜಿಯ ತತ್ವ ಸಿದ್ಧಾಂತಗಳ ಬಗ್ಗೆ ನನ್ನ ಅನಿಸಿಕೆ'  ಎಂಬ ವಿಷಯದ ಬಗ್ಗೆ  8ನೇ ತರಗತಿಯ ಅಪ್ಸಾನ ಬಾನು ಹಾಗೂ 'ಲಾಲ್ ಬಹದ್ದೂರ್ ಶಾಸ್ತ್ರಿಗಳ ಜೀವನ ಆದರ್ಶಗಳು ' ಈ ವಿಷಯದ ಬಗ್ಗೆ 9ನೇ ತರಗತಿಯ ಪ್ರತಿಕ್ಷ ಆರ್ ಶೆಟ್ಟಿ ಮಾತನಾಡಿದರು.

 ಶಾಲಾ  ಇಂಟರ್ಯಾಕ್ಟ್ ಕ್ಲಬ್ , ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಶಿಕ್ಷಕರುಗಳು ಶಾಲಾ ಆವರಣ, ಶಾಲೆಯ ಸಮೀಪದ ಬಸ್ ನಿಲ್ದಾಣ,ದ ಸ್ವಚ್ಛತೆಯನ್ನು ಕೈಗೊಂಡರು.
ಈ ಸಂದರ್ಭ ಶಾಲಾ ಮುಖ್ಯೊಫಾಧ್ಯಾಯಿನಿ ಇಂದಿರಾ ಎನ್ ರಾವ್ ,ನಿರ್ಮಲ ಎನ್ ರಾವ್ ,ಎಸ್ ಡಿ ಎಂಸಿ ಸದಸ್ಯರುಗಳು,ಶಾಲಾ ಶಿಕ್ಷಕ ವೃಂದ  ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿನ್ನಿ ನಿರ್ಮಲ ಡಿಸೋಜಾ  ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


ವಿಠ್ಠಲ್ ದಾಸ ನಾಯಕ್  ಇವರ ವತಿಯಿಂದ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಯನ್ನು ವಿತರಿಸಲಾಯಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article