ಸಪ್ತಗಿರಿ ಶ್ರೀಶಾರದಾ ಮಹೋತ್ಸವ , ದ್ವಿತೀಯ ವರ್ಷದ ಶಾರದಾ ಮಹೋತ್ಸವ
Wednesday, October 2, 2024
ಕಿನ್ನಿಗೋಳಿ:ಸಪ್ತಗಿರಿ ಶ್ರೀಶಾರದಾ ಮಹೋತ್ಸವ ಸಪ್ತಗಿರಿ ನಿವಾಸ ಕಂಬಳರೋಡ್ ಐಕಳದಲ್ಲಿ ದ್ವಿತೀಯ ವರ್ಷದ ಶಾರದಾ ಮಹೋತ್ಸವವು ಅ.10 ರ ಗುರುವಾರದಂದು ನಡೆಯಲಿದೆ.ಆಪ್ರಯುಕ್ತ ಬೆಳಿಗ್ಗೆ 7:30ಕ್ಕೆ ಸ್ಥಳ ಶುದ್ದಿ,8 ಕ್ಕೆ ಗಣಪತಿ ಹೋಮ,9:30 ಕ್ಕೆ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ,10 ರಿಂದ ಭಜನಾ ಸಂಕೀರ್ತಣೆ ,ಮಧ್ಯಾಹ್ನ 12:30ಕ್ಕೆ ಶಾರದಾ ಮಾತೆಯ ಮಹಾಪೂಜೆ,ಮಹಾಪೂಜೆಯ ನಂತರ ಮಹಾ ಅನ್ನಸಂತರ್ಪಣೆಯು ನಡೆಯಲಿದೆ.ಹಾಗೂ ಸಂಜೆ ಶ್ರೀ ಶಾರದ ಮಾತೆಯ ವಿಸರ್ಜನಾ ಮೆರವಣೆಗೆಯು ನಡೆಯಲಿದೆ ಎಂದು ಸುಧೀರ್ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಜನಾ ಸಂಕೀರ್ತಣೆಯಲ್ಲಿ ಶ್ರೀ ಉಳ್ಳಾಲ್ತಿ ಬಾಲ ಭಜನಾ ಮಂಡಳಿ ಬೊಂಡಾಲ ಕಾಂಪ್ರಬೈಲು ಹಾಗೂ ಶ್ರೀದುರ್ಗಾಪರಮೇಶ್ವರೀ ಭಜನಾ ಮಂಡಳಿ ಗಂಧಕಾಡು ಪದವಿನಂಗಡಿ ಭಜನಾ ತಂಡಗಳು ಭಾಗವಹಿಸಲಿದೆ.ಮಧ್ಯಾಹ್ನ 12 ಕ್ಕೆ ಮಹಿಳೆಯರಿಗೆ ವಿಶೇಷ ಕುಂಕುಮಾರ್ಚನೆ ಸೇವೆ ನೆರವೇರಲಿದೆ.