-->


ಕಟೀಲು  ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಆ.3 ರಿಂದ 13 ರ ವರೆಗೆ ನವರಾತ್ರಿ ಉತ್ಸವ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಆ.3 ರಿಂದ 13 ರ ವರೆಗೆ ನವರಾತ್ರಿ ಉತ್ಸವ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಆ.3  ರಿಂದ 13 ರ ವರೆಗೆ ನವರಾತ್ರಿ ಉತ್ಸವ ನಡೆಯಲಿದೆ.
ದಿನಂಪ್ರತಿ ಹಗಲಿನಲ್ಲಿ ವಿವಿಧ ಭಜನಾ ತಂಡಗಳಿಂದ ಭಜನೆ, ಸಂಜೆ ೫ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ ೭ರಿಂದ ದಶಾವತಾರ ಕಥೆಯನ್ನಾಧರಿಸಿದ ಯಕ್ಷಗಾನ ಬಯಲಾಟಗಳು ನಡೆಯಲಿವೆ. ತಾ. ೩ರ ಆರಂಭದ ದಿನ ತುಳು ತಾಳಮದ್ದಲೆ, ತಾ.೪ರಂದು ಸುಮಂಗಲಾ ರತ್ನಾಕರ್ ತಂಡದಿಂದ ಭರತನಾಟ್ಯ, ತಾ. ೫ರಂದು ಚಿನ್ಮಯ ಮನೀಶ್ ರಿಂದ ಶಾಸ್ತ್ರೀಯ ಸಂಗೀತ, ತಾ.೬ಕ್ಕೆ ಯಕ್ಷಪಲ್ಲವಿ ತಂಡದಿಂದ ಬಡುಗುತಿಟ್ಟು ಯಕ್ಷಗಾನ, ತಾ. ೭ಕ್ಕೆ ಕು. ಉತ್ಪಲ ಡಿ.ಬಿ.ಯವರಿಂದ ಭರತನಾಟ್ಯ, ತಾ,೮ರಂದು ಲಲಿತಾಪಂಚಮಿ, ತಾಳಮದ್ದಲೆ, ತಾ.೯ಕ್ಕೆ ಮೂಲಾನಕ್ಷತ್ರ ಶಾರದಾಪೂಜೆಯಂದು ಭಾರತೀ ಸುರೇಶ್ ರಿಂದ ಭರತನಾಟ್ಯ, ತಾ. ೧೦ಕ್ಕೆ ಬೆಂಗಳೂರು ತಂಡದಿಂದ ಯಕ್ಷಗಾಣ, ತಾ.೧೧ಕ್ಕೆ ರಕ್ಷಾ ಕಾರ್ತಿಕ್ ರಿಂದ ಭರತನಾಟ್ಯ, ತಾ.೧೨ರಂದು ಮಹಾನವಮಿ, ವಿನಯ್ ಎಸ್. ಆರ್ ಇವರಿಂದ ಶಾಸ್ತೀಯ ಸಂಗೀತ, ತಾ. ೧೩ರಂದು ವಿಜಯದಶಮೀ, ಮಧ್ವಜಯಂತಿ, ಸೌಮ್ಯ ಸುಧೀಂದ್ರ ರಾವ್ ಇವರಿಂದ ಭರತನಾಟ್ಯ ನಡೆಯಲಿದೆ. 

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article