
ರೋಶನಿ ನಿಲಯ ಜಿಲ್ಲಾಮಟ್ಟದ ಅಂತರ್ ಕಾಲೇಜು ನೃತ್ಯ ರೂಪಕ ಸ್ಪರ್ಧೆ
Tuesday, October 1, 2024
ಮಂಗಳೂರು: ಎಂ.ಆರ್ ಪಿ.ಎಲ್ ಸಂಸ್ಥೆ ಸ್ವಚ್ಚತೆಗೆ ವಿಶೇಷ ಗಮನ ಹರಿಸುತ್ತಿದ್ದು ಶಾಲಾ ಕಾಲೇಜು ಮತ್ತು ವಿವಿಧ ಸಂಘ ಸಂಸ್ಥೆಗಳಿಗೆ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದೆ.ಬೀಚ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚಾತ ಕಾರ್ಯಗಳನ್ನು ನಿರಂತರ ಹಮ್ಮಿಕೊಂಡಿದೆ ಎಂದು ಎಂ ಆರ್ ಪಿ ಎಲ್ ನ ಸಿ.ಎಸ್.ಆರ್ ವಿಭಾಗದ ಮುಖ್ಯಸ್ಥ ಪ್ರಶಾಂತ್ ಬಾಳಿಗ ಹೇಳಿದರು. ಅವರು ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದಲ್ಲಿ ಮಂಗಳೂರು ರಿಪೈನರಿ ಹಾಗೂ ಪೆಟ್ರೋಕೆಮಿಕಲ್ ಲಿಮಿಟೆಡ್ ಬಿ ಎಸ್ ಡಬ್ಲ್ಯೂ ವಿಭಾಗ ರೋಶನಿ ನಿಲಯ , ಯೂತ್ ರೆಡ್ ಕ್ರಾಸ್ ಮತ್ತು IQAC ಸಹಯೋಗದಲ್ಲಿ 'ಧ್ವನ್ 2024 ' ಜಿಲ್ಲಾ ಮಟ್ಟದ ಸ್ವಚ್ಚತಾ ಹೀ ಸೇವಾ ಎಂಬ ವಿಷಯದ ಬಗೆಗಿನ ನೃತ್ಯ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ 'ಹಸಿರು ದಳದ ' ಸಂಯೋಜಕರಾದ ಪರಿಸರವಾದಿ ನಾಗರಾಜ್ ಬಜಾಲ್ ಮಾತನಾಡಿ ಸ್ವಚ್ಚತೆ ಎಂಬುವುದು ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು.ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧ ಮಾಡಲಾಗದಿದ್ದರೂ ಆದಷ್ಟು ಕಡಿಮೆ ಮಾಡಬೇಕು. ಏಕ ಬಳಕೆ ಪ್ಲಾಸ್ಟಿಕ್ ಮಾತ್ರ ಉಪಯೋಗ ಮಾಡಬೇಕು ಎಂದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ರಂಗಭೂಮಿ ಕಲಾವಿದ ,ನಟ , ನಿರ್ದೇಶಕ ಸುಂದರ್ ರೈ ಮಂದಾರ ಅವರು ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಅಲೆಕ್ಸಾಂಡರ್ ಜೋಯೆಲ್ ಫೆರೇರ, ಜಗನ್ ಪವರ್ ಹಾಗೂ ವರ್ಷ ಲೋಬೊ ತೀರ್ಪುಗಾರರಾಗಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಜಿಲ್ಲೆಯ 6 ತಂಡಗಳು ಭಾಗವಹಿಸಿದ್ದು, ಪ್ರಥಮ ಬಹುಮಾನ- ಆಳ್ವಾಸ್ ಕಾಲೇಜು ಮೂಡುಬಿದಿರೆ, ದ್ವಿತೀಯ ಬಹುಮಾನ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ ಸ್ಟ್ರೀಟ್ ನ ತಂಡ ಪಡೆಯಿತು.
ವಿಜೇತ ತಂಡಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ, ಪಲಕ ನೀಡಲಾಯಿತು. ಈ ಸಂದರ್ಭ ಸಹಾಯಕ ಪ್ರಾಧ್ಯಾಪಕ ಮಿಸ್ ಕೊಲಿನ್ ಡಿಸೋಜ, ಐಕ್ಯೂಎಸಿ ಸಂಯೋಜಕ ಡಾ ಸರಿತಾ ಲೋಬೊ, ದೀಪಿಕಾ ಸನಿಲ್ , ಸಹಯೋಗ್ ಸಂಘದ ಅಧ್ಯಕ್ಷ ಸಂಕೇತ್ ನಾಯಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಎಂ.ಆರ್.ಪಿ.ಎಲ್ ಸಂಸ್ಥೆಯ ಅಧಿಕಾರಿ ಸ್ಟೀವನ್ ಪಿಂಟೋ ಪ್ರಸ್ತಾವನೆಗೈದರು. ಬಿ. ಎಸ್. ಡಬ್ಲ್ಯೂ ವಿಭಾಗದ ಮುಖ್ಯಸ್ಥ ವೀಣಾ ಬಿ. ಕೆ ಸ್ವಾಗತಿಸಿದರು. ಯೂತ್ ರೆಡ್ ಕ್ರಾಸ್ ಸಂಯೋಜಕ ಅನುಸೂಯ ಕಾಮತ್ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿಗಳಾದ ಬ್ರಾಹ್ಮಿ, ಕುಮಾರ್ ಕೆವಿನ್ ಕ್ರಾಸ್ತಾ ,ಕಥೀಜ ಮೆಹ್ತಾ ಕಾರ್ಯಕ್ರಮ ನಿರೂಪಿಸಿದರು.