ಸ್ಕೂಟರ್ನಲ್ಲಿ ಅವಿತುಕುಳಿತಿದ್ದ ವಿಷಕಾರಿ ಹಾವು ಕಚ್ಚಿ ವ್ಯಕ್ತಿಗೆ ಗಾಯ
Monday, September 30, 2024
ಬಜಪೆ:ದ್ವಿಚಕ್ರ ವಾಹನದ ಸೀಟಿನ ಒಳಗಡೆ ಅವಿತು ಕುಳಿತಿದ್ದ ವಿಷಕಾರಿ ಕನ್ನಡಿ ಹಾವೊಂದು ವ್ಯಕ್ತಿಯೊಬ್ಬರಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಕುಪ್ಪೆಪದವಿನಲ್ಲಿ ನಡೆದಿದೆ.ಕುಪ್ಪೆಪದವಿನ ನಿವಾಸಿ ಇಮ್ತಿಯಾಜ್ ಅವರು ವಿಷಕಾರಿ ಕನ್ನಡಿ ಹಾವಿನ ಕಡಿತಕ್ಕೆ ಒಳಗಾದವರು.ಇವರು ಕುಪ್ಪೆಪದವಿನಲ್ಲಿ ಸೈಬರ್ ಸೆಂಟರ್ ನ್ನು ನಡೆಸುತ್ತಿದ್ದಾರೆ.
ಇಮ್ತಿಯಾಜ್ ಅವರ ಎಲೆಕ್ಟ್ರಿಕ್ ಸ್ಕೂಟರ್ ನ್ನು ಮಸೀದಿಗೆ ಹೋಗುವ ಸಂದರ್ಭ ನಿಲ್ಲಿಸಿ ಹೋಗಿದ್ದು,ಮಸೀದಿಯಿಂದ ವಾಪಸ್ಸು ಬಂದು ಸ್ಕೂಟರ್ ನ ಸೀಟನ್ನು ಓಪನ್ ಮಾಡಿ ಪತ್ರಗಳನ್ನು ಇಡುವ ಸಂದರ್ಭ ಸೀಟಿನ ಒಳಗಡೆ ಅವಿತು ಕುಳಿತಿದ್ದ ವಿಷಕಾರಿ ಕನ್ನಡಿ ಹಾವು ಅವರ ಕೈಗೆ ಕಚ್ಚಿ ಗಾಯಗೊಳಿಸಿದೆ.ಗಾಯಗೊಂಡ ಇಮ್ತಿಯಾಜ್ ಅವರು ಆಸ್ಪತ್ರೆಗೆ ದಾಖಲಾಗಿದ್ದು,ಚೇತರಿಸಿಕೊಳ್ಳುತ್ತಿದ್ದಾರೆ.
ದ್ವಿಚಕ್ರ ವಾಹನಗಳ ಸವಾರರೆ ನಿಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ ಸ್ಥಳದಿಂದ ಕೊಂಡೊಯ್ಯುವಾಗ ಹೆಚ್ಚಿನ ಜಾಗರೂಕತೆಯನ್ನು ವಹಿಸುವುದು ಸೂಕ್ತ.