ಕಟೀಲು ದೇವಳದ ವಿದ್ಯಾಸಂಸ್ಥೆಯಲ್ಲಿ ಗುರುವಂದನೆ ಕಾರ್ಯಕ್ರಮ
Saturday, September 28, 2024
ಕಟೀಲು : ಬದುಕಿನ ಪಾಠಗಳನ್ನೂ ಕಲಿಸಿ, ವ್ಯಕ್ತಿತ್ವ ರೂಪಿಸುವ ಶಿಕ್ಷಕರನ್ನು ಯಾವತ್ತಿಗೂ ಗೌರವಿಸಬೇಕು ಎಂದು ಬೆಂಜನಪದವು ಸರಕಾರಿ ಪದವೀಪೂರ್ವ ಕಾಲೇಜಿನ ಉಪಪ್ರಾಚಾರ್ಯ, ಹಾಗೂ ಕಟೀಲು ವಿದ್ಯಾಸಂಸ್ಥೆಗಳ ಹಿರಿಯ ವಿದ್ಯಾರ್ಥಿ ಅನಂತಪದ್ಮನಾಭ ಶಿಬರೂರು ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ವಿದ್ಯಾಸಂಸ್ಥೆಗಳ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆಯ ಸಲುವಾಗಿ ಆಯೋಜಿಸಲಾದ ನಿವೃತ್ತ ಶಿಕ್ಷಕರಿಗೆ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರ್ಚಕ ವೆಂಕಟರಮಣ ಆಸ್ರಣ್ಣ ಮಾತನಾಡಿ ಜೀವ ಉಳಿಸುವ ವೈದ್ಯರನ್ನು, ವಿದ್ಯೆ ಕಲಿಸುವ ಗುರುಗಳನ್ನು ಯಾವತ್ತಿಗೂ ಮರೆಯಬಾರದು ಎಂದರು.
ಕಟೀಲು ಪದವೀ ಕಾಲೇಜಿನ ನಿವೃತ್ತ ಪ್ರಾಚಾರ‍್ಯ ಡಾ. ಕೃಷ್ಣ ಕಾಂಚನ್, ಪದವೀಪೂರ್ವ ಕಾಲೇಜಿನ ನಿವೃತ್ತ ಉಪನಸ್ಯಾಸಕ ಸುರೇಶ್ ಶೆಟ್ಟಿ, ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ತಾರಾ ಟಿ, ಹಾಗೂ ಪದವಿ ಕಾಲೇಜಿನಲ್ಲಿ ಕಚೇರಿ ಅಧೀಕ್ಷಕರಾಗಿದ್ದ ಜಯರಾಮ ಶೆಟ್ಟಿ ಇವರನ್ನು ಸಂಮಾನಿಸಲಾಯಿತು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕಯ್ಯ ಸಾಲ್ಯಾನ್, ಮಿಥುನ ಕೊಡೆತ್ತೂರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಪದವಿ ಕಾಲೇಜಿನ ಡಾ. ವಿಜಯ್ ವಿ., ಪದವೀಪೂರ್ವ ಕಾಲೇಜಿನ ಕುಸುಮಾವತಿ, ಪ್ರೌಢಶಾಲೆಗಳ ರಾಜಶೇಖರ್, ಗಿರೀಶ್ ತಂತ್ರಿ, ಪ್ರಾಥಮಿಕ ಶಾಲೆಗಳ ಚಂದ್ರಶೇಖರ ಭಟ್, ಸರೋಜಿನಿ, ವೇದಿಕೆಯಲ್ಲಿದ್ದರು. ಶಿಕ್ಷಕ ಶ್ರೀವತ್ಸ ನಿರೂಪಿಸಿದರು.