ಶಿವಳ್ಳಿಸ್ಪಂದನ ಕಟೀಲು ವಲಯ ವತಿಯಿಂದ ಪರಿಸರದ ಮಠಗಳಲ್ಲಿ ಗಾಯತ್ರೀ ಜಪ ಸಪ್ತಾಹದ ಸರಣಿ
Tuesday, October 15, 2024
ಮೂಲ್ಕಿ : ಚಿತ್ರಾಪುರದಲ್ಲಿ ನಡೆಯಲಿರುವ ಕೋಟಿ ಗಾಯತ್ರೀ ಜಪಯಜ್ಞದ ಪ್ರಯುಕ್ತ ಶಿವಳ್ಳಿಸ್ಪಂದನ ಕಟೀಲು ವಲಯ ವತಿಯಿಂದ ಪರಿಸರದ ಮಠಗಳಲ್ಲಿ ಗಾಯತ್ರೀ ಜಪ ಸಪ್ತಾಹದ ಸರಣಿ ಅಂಗವಾಗಿ ಜಪ ಕಿನ್ನಿಗೋಳಿ ಕೊಡೆತ್ತೂರು ದೇವಸ್ಯ ಮಠ ಶ್ರೀನಿವಾಸ ದೇವರ ಸನ್ನಿಧಿಯಲ್ಲಿ ಜರುಗಿತು.
ದೇವಸ್ಯಮಠದ ಮುಖ್ಯಸ್ಥ ವೇದವ್ಯಾಸ , ಸುಧಾ ಉಡುಪ ದಂಪತಿಗಳಿಂದ ಫಲನ್ಯಾಸ , ಅಧ್ಯಕ್ಷ ಅನಂತಪದ್ಮನಾಭ ರಿಂದ ಪ್ರಾರ್ಥನೆ ನಡೆಯಿತು. ಸುಬ್ರಹ್ಮಣ್ಯಪ್ರಸಾದ್ ಕೋರ್ಯಾರ್ ಯಾಗದ ಮಾಹಿತಿ ನೀಡಿದರು.
ರಾಮಚಂದ್ರ ಉಡುಪ , ಡಾ। ಗುರುರಾಜ್ ಉಡುಪ , ಸುರೇಶ್ ರಾಜ್ , ವೇಂಕಟಕೃಷ್ಣ , ರಮೇಶ್ ಭಟ್ , ಸುರೇಶ್ ರಾವ್ , ಅನಂತ ಭಟ್ , ಸಂತೋಷ್ ಕೈಯ್ಯೂರು , ಅಶೋಕ್ ರಾವ್ , ನಾರಾಯಣ ಭಟ್ ಮುಂತಾದವರು ಉಪಸ್ಥಿತರಿದ್ದರು.