ಕಟೀಲಿನಲ್ಲಿ ಕಲಾ ತರಗತಿಗಳ ಉದ್ಘಾಟನೆ
Tuesday, October 15, 2024
ಕಟೀಲು : ಶ್ರೀ ಕಟೀಲು ಪ್ರತಿಷ್ಠಾನದ ವತಿಯಿಂದ ಮಕ್ಕಳಲ್ಲಿ ಸಂಸ್ಕಾರ, ಸಾಂಸ್ಕೃತಿಕ ಆಸಕ್ತಿ ಮೂಡಿಸುವ ದೃಷ್ಟಿಯಿಂದ ಉಚಿತವಾಗಿ ಭಜನೆ, ಸಂಗೀತ ಹಾಗೂ ಭರತನಾಟ್ಯ ತರಗತಿಗಳನ್ನು ನಡೆಸಲಾಗುತ್ತಿದ್ದು, ಇನ್ನು ಮುಂದಕ್ಕೆ ತಬಲಾ, ಹಾರ್ಮೋನಿಯಂ ಹಾಗೂ ನಾಗಸ್ವರ ವಾದನ ತರಗತಿಗಳನ್ನೂ ನಡೆಸಲಾಗುವುದು ಎಂದು ಕಟೀಲು ಪ್ರತಿಷಟಾನ ಅಧ್ಯಕ್ಷ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.
ಅವರು ಕಟೀಲು ಸರಸ್ವತೀ ಸದನದಲ್ಲಿ ಮಕ್ಕಳಿಗೆ ಉಚಿತವಾಗಿ ನಡೆಸುವ ಕಲಾತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಕಲಾ ಸಂಘಟಕ ನಿತ್ಯಾನಂದ ರಾವ್, ಪ್ರತಿಷ್ಟಾನದ ಸುಬ್ರಹ್ಮಣ್ಯಪ್ರಸಾದ್ ಕೋರ‍್ಯಾರ್, ತಿಮ್ಮಪ್ಪ ಕೋಟ್ಯಾನ್, ಲಿಂಗಪ್ಪ ಸೇರಿಗಾರ, ಅರುಣಾ ರಾವ್, ವಾಸು ಮಾಸ್ಟರ್ ಮತ್ತಿತರರಿದ್ದರು.