ಅಗೌಕಿನ್ನಿಗೋಳಿ ಶತಮಾನೋತ್ಸವ, ಬಿ.ಜನಾರ್ದನ ಭಟ್ಟರ ೧೦೦ನೆಯ ಕೃತಿ ಬಿಡುಗಡೆ
Tuesday, October 15, 2024
ಕಿನ್ನಿಗೋಳಿ : ಖ್ಯಾತ ಸಾಹಿತಿ ಅ.ಗೌ. ಕಿನ್ನಿಗೋಳಿ ಇವರ ಶತಮಾನೋತ್ಸವ ಆಚರಣೆ ಹಾಗೂ ಡಾ. ಬಿ. ಜನಾರ್ದನ ಭಟ್ ಇವರ ೯೯, ೧೦೦ ಹಾಗೂ ೧೦೧ನೆಯ ಕೃತಿಗಳ ಬಿಡುಗಡೆಯನ್ನು ತಾ.೨೦ರ ಭಾನುವಾರ ಸಂಜೆ ೪ಗಂಟೆಗೆ ಕಿನ್ನಿಗೋಳಿ ಮೇರಿವೆಲ್ ಶಾಲೆ ಬಳಿಯ ಶ್ರೀಗಂಧ ನಿವಾಸದಲ್ಲಿ ಆಯೋಜಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಆಯೋಜಿಸಿರುವ ಈ ಕಾರ‍್ಯಕ್ರಮದಲ್ಲಿ ಡಾ. ಕೆ. ಚಿನ್ನಪ್ಪ ಗೌಡ ಅ.ಗೌ. ಸಂಸ್ಮರಣೆ ಮಾತುಗಳನ್ನಾಡಲಿದ್ದಾರೆ. ಆಶ್ವೀಜಾ ಉಡುಪ ಅಚ್ಯುತ ಗೌಡರ ಕಾವ್ಯಗಳ ಗಾಯನ ಮಾಡಲಿದ್ದಾರೆ.
ಡಾ. ಬಿ. ಜನಾರ್ದನ ಭಟ್ಟರ ೯೯ನೇ ಕೃತಿ ಕಪ್ಪೆ ಹಿಡಿಯುವವನ ಕಥಾ ಸಂಕಲನವನ್ನು ಬಿ. ರಾಮಚಂದ್ರ ಆಚಾರ್ಯ, ನೂರನೇ ಕೃತಿ ಕನ್ನಡ ಕಾದಂಬರಿ ಮಾಲೆಯನ್ನು ಕಸಾಪ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ೧೦೧ನೇ ಕೃತಿ ಹೊಸನೋಟಗಳ ಸಮಾಜವಿಮರ್ಶಕ ಸಾಹಿತಿ ಅ.ಗೌ.ಕಿನ್ನಿಗೋಳಿ ಕೃತಿಯನ್ನು ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಬಿಡುಗಡೆಗೊಳಿಸಲಿದ್ದಾರೆ. ಅ.ಗೌ. ಕಿನ್ನಿಗೋಳಿಯವರ ಮಗಳು ಶ್ರೀಮತಿ ಜಯಂತಿ ಹಾಗೂ ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಶೆಟ್ಟಿ ಉಪಸ್ಥಿತರಿರುತ್ತಾರೆ ಎಂದು ಕಸಾಪ ಮೂಲ್ಕಿ ತಾಲೂಕು ಘಟಕಾಧ್ಯಕ್ಷ ಅಧ್ಯಕ್ಷ ಮಿಥುನ ಕೊಡೆತ್ತೂರು ತಿಳಿಸಿದ್ದಾರೆ.
ಅ. ಗೌ. ಕಿನ್ನಿಗೋಳಿ : ಅ. ಗೌ. ಕಿನ್ನಿಗೋಳಿ ಕಾವ್ಯನಾಮದ ಅಚ್ಯುತಗೌಡ ಕಿನ್ನಿಗೋಳಿ (೧೯೨೧-೧೯೭೬) ಕರಾವಳಿಯ ಗಣ್ಯ ಕವಿ, ನಾಟಕಕಾರ, ಕಾದಂಬರಿಕಾರ. ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಎಂಬ ಊರಿನವರಾದ ಅವರು ಇಲ್ಲಿಯ ಲಿಟ್ಲ್ ಫ್ಲವರ್ ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತರಾಗಿದ್ದರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಖಂಡ ಕಾವ್ಯಗಳು, ದೃಶ್ಯಲಹರಿಗಳು, ಕಾದಂಬರಿಗಳು, ಕವನಗಳು ಮತ್ತು ವಿಮರ್ಶೆ ಇತ್ಯಾದಿ ಬರಹಗಳನ್ನು ಕೊಟ್ಟಿದ್ದಾರೆ. ’ಕಾವ್ಯ ಲಹರಿ’ (ಚಿತಾಗ್ನಿ, ಪುನರ್ಮಿಲನ, ಮೊದಲ ಭಿಕ್ಷುಣಿ, ಕ್ಷಾತ್ರ ದರ್ಶನ ಮತ್ತು ಶಿವಲೇಶ್ಯೆ ಖಂಡ ಕಾವ್ಯಗಳು), ’ದೃಶ್ಯ ಲಹರಿ’ ರಂಗ ಕೃತಿಗಳು, ’ಒಡ್ಡಿದ ಉರುಳು’ ಮತ್ತು ’ಬಿಡುಗಡೆಯ ನಾಂದಿ’ ಎಂಬ ಕಾದಂಬರಿಗಳು; ’ವತ್ಸ - ವಿಜಯ’ (ಮುದ್ದಣನ ’ರತ್ನಾವತಿ ಕಲ್ಯಾಣ’ ಯಕ್ಷಗಾನ ಕೃತಿಯ ಗದ್ಯ ರೂಪಾಂತರ) ಮತ್ತು ’ಸರಸ - ವಿರಸ’ (ನಾಲ್ಕು ವಿನೋದ ಚಿತ್ರಗಳು) - ಈ ಕೃತಿಗಳು ಅ. ಗೌ. ಕಿನ್ನಿಗೋಳಿಯವರ ಬಹುಮುಖ್ಯ ಕೃತಿಗಳು.
ಡಾ. ಬಿ. ಜನಾರ್ದನ ಭಟ್ : ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಡಾ. ಬಿ. ಜನಾರ್ದನ ಭಟ್ ಅವರು ಇಂಗ್ಲಿಷ್ ಉಪನ್ಯಾಸಕರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಎಂ. ಎ. ಪದವಿ, ಇಂಗ್ಲಿಷಿನಲ್ಲಿ ಎಂ.ಫಿಲ್ ಪದವಿ, ಕನ್ನಡ ಎಂ.ಎ. ಪದವಿಗಳನ್ನು ಪಡೆದು, ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್. ಡಿ. ಪಡೆದಿದ್ದಾರೆ. ಪ್ರಶಸ್ತಿ ವಿಜೇತ ೮ ಕಾದಂಬರಿಗಳ ಸಹಿತ ೧೦೦ಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಮೂರು ಕಾದಂಬರಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳು ಸಿಕ್ಕಿವೆ. ವರ್ಧಮಾನ ಪ್ರಶಸ್ತಿ, ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ, ತುಮಕೂರಿನ ವೀಚಿ ಪ್ರಶಸ್ತಿ, ಮೂಡುಬಿದಿರೆಯ ಶಿವರಾಮ ಕಾರಂತ ಪುರಸ್ಕಾರ, ಬೆಂಗಳೂರಿನ ಮಾಸ್ತಿ ಕಾದಂಬರಿ ಪುರಸ್ಕಾರ, ಮುಂಬಯಿಯ ವ್ಯಾಸರಾಯ ಬಲ್ಲಾಳ ಕಾದಂಬರಿ ಪ್ರಶಸ್ತಿ, ವಿಶುಕುಮಾರ್ ಪ್ರಶಸ್ತಿ - ಇತ್ಯಾದಿಗಳನ್ನು ಪಡೆದಿದ್ದಾರೆ. ಡಾ. ಬಿ. ಜನಾರ್ದನ ಭಟ್ ಅವರ ಮಹತ್ವದ ನೂರನೆಯ ಕೃತಿ ಬಿಡುಗಡೆಯಾಗಲಿದೆ.