ಮೂಲ್ಕಿ ತಹಶೀಲ್ದಾರ್ ಕಚೇರಿಯ ಮುಂದೆ ಗ್ರಾಮ ಆಡಳಿತಾಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ ಆರಂಭ
Friday, September 27, 2024
ಮೂಲ್ಕಿ: ಗ್ರಾಮ ಆಡಳಿತಾಧಿಕಾರಿಗಳ ಸಂಘ ಬೆಂಗಳೂರು ಇವರ ನಿರ್ದೇಶನದಂತೆ ಹಲವಾರು ಭೇಟಿಗಳನ್ನ ಈಡೇರಿಸುವಂತೆ ಗುರುವಾರದಿಂದ ನಡೆಯುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮೂಲ್ಕಿ ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಬೆಂಬಲಿಸಿ ಗುರುವಾರ ಮೂಲ್ಕಿ ತಹಶೀಲ್ದಾರ್ ಕಚೇರಿಯ ಮುಂದೆ ಶಾಂತಿಯುತವಾಗಿ ಪ್ರತಿಭಟನೆ ಆರಂಭಗೊಂಡಿದೆ.
ಸರ್ಕಾರವು ಕಂದಾಯ ಇಲಾಖೆಗೆ ಅಭಿವೃದ್ಧಿಪಡಿಸಿದ ೨೧ ಮತ್ತು ಮೊಬೈಲ್ ತಂತ್ರಾಂಶದಿಂದ ಕೆಲಸ ಮಾಡಲು ಉತ್ತಮ ಗುಣಮಟ್ಟದ ಮೊಬೈಲ್ ಅಥವಾ ಲ್ಯಾಪ್‌ಟಾಪ್, ಗೂಗಲ್ ಕ್ರೋಮ್, ಬುಕ್ ಪ್ರಿಂಟರ್, ಸ್ಕ್ಯಾನರ್ ಸೌಲಭ್ಯ ಇಲ್ಲದೆ ಇರುವುದು ಸಿಬಂಧಿ ವೃಂದದ ನೌಕರರ ೧೦ಪಟ್ಟು ಕೆಲಸ ಮಾಡುವುದು ಸೇರಿದಂತೆ ಅನೇಕ ಬೇಡಿಕೆ ಮುಂದಿರಿಸಿ ಮುಷ್ಕರ ನಿರತರಾಗಿದ್ದಾರೆ.
ಮೂಲ್ಕಿ ತಾಲ್ಲೂಕಿನಲ್ಲಿ ೩೦ ಗ್ರಾಮಗಳಲ್ಲಿ ಆರು ಗ್ರಾಮ ಆಡಳಿತ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದು ತಾಲ್ಲೂಕು ಕಚೇರಿಯಲ್ಲಿ ಮೂರು ಮಂದಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲಸದ ಒತ್ತಡ ಸಹಿತ ಮಾನಸಿಕವಾಗಿ ತೊಡಗಿಕೊಳ್ಳಲು ಸಾಧ್ಯವಾಗದ ಪರಿಸ್ಥಿಯಲ್ಲಿರುವ ಗ್ರಾಮ ಆಡಳಿತಾಧಿಕಾರಿಗಳಿಗೆ ಕೆಲಸ ನಿರ್ವಹಿಸಿದೇ ಇದ್ದರೇ, ಜನರ ಹಿಡಿಶಾಪಕ್ಕೂ ತುತ್ತಾಗುತ್ತಿದ್ದೇವೆ ಎಂದು ಮೂಲ್ಕಿ ತಾಲ್ಲೂಕು ಸಂಘದ ಅಧ್ಯಕ್ಷ ಸುಜಿತ್ ಅವರು ಪ್ರತಿಕ್ರಿಯಿಸಿದ್ದು, ಅವರ ನೇತೃತ್ವದಲ್ಲಿ ಮುಷ್ಕರ ನಿರತರು ಕಪ್ಪು ಪಟ್ಟಿ ಧರಿಸಿ ತಮ್ಮ ಪ್ರತಿಭಟನೆ ಮುಷ್ಕರದಲ್ಲಿ ನಿರತರಾಗಿದ್ದಾರೆ.