-->

ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು 🙏

ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು  🙏
ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು 🙏
ಮರಳು ಸಾಗಾಟದ ಟಿಪ್ಪರ್ ಪಲ್ಟಿ

ಮರಳು ಸಾಗಾಟದ ಟಿಪ್ಪರ್ ಪಲ್ಟಿ

ಕಿನ್ನಿಗೋಳಿ:ಮರಳು ಸಾಗಾಟದ ಟಿಪ್ಪರೊಂದು ಪಲ್ಟಿಯಾದ ಘಟನೆ 
ಪೊಲೀಸ್‌ ಠಾಣಾ ವ್ಯಾಪ್ತಿಯ ಎಳಿಂಜೆ ಗ್ರಾಮದ ಪಟ್ಟೆ ಕ್ರಾಸ್ ಬಳಿ ನಡೆದಿದೆ. ಮರಳು ತುಂಬಿದ ಲಾರಿಯೊಂದು ಮುಗುಚಿ ಬಿದ್ದಿರುವುದಾಗಿ  ಮಾಹಿತಿ ತಿಳಿದು  ಮುಲ್ಕಿ ಪೊಲೀಸರು ಪಟ್ಟೆ ಕ್ರಾಸ್ ಎಂಬಲ್ಲಿಗೆ ತೆರಳಿ ಪರಿಶೀಲಿಸಿದಾಗ
ಅಕ್ರಮ ಮರಳು ಸಾಗಾಟ ಬಯಲಿಗೆ ಬಂದಿದ್ದು  ಮರಳನ್ನು ಸಹಿತ ಕ್ರೇನ್ ಹಾಗೂ ಜೆಸಿಬಿಯನ್ನು ವಶಪಡಿಸಿಕೊಂಡು ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ
ಕಿನ್ನಿಗೋಳಿ ಸಮೀಪದ ಎಳಿಂಜೆ
ಪಟ್ಟೆ ಕ್ರಾಸ್ ನಂದಿನಿನದಿ ಬದಿಗೆ ಹಾದು ಹೋಗುವ ಕಚ್ಚಾ ಮಣ್ಣು ರಸ್ತೆಯ ಇಳಿಜಾರು ಪ್ರದೇಶದಲ್ಲಿ ಸುಮಾರು 1 ಟಿಪ್ಪರ್ ಲಾರಿ ಲೋಡಿನಷ್ಟು ಸಾಮಾನ್ಯ ಮರಳು ಬಿದ್ದುಕೊಂಡಿದ್ದು ಸ್ಥಳದಲ್ಲಿದ್ದ ಕ್ರೇನ್ ನ  ಅಪರೇಟರ್ ಜಬ್ಬರ್ ಬಳಿ ವಿಚಾರಿಸಿದಾಗ ಮರಳು ತುಂಬಿದ ಟಿಪ್ಪರ್ ಲಾರಿಯು ರಸ್ತೆ ಬದಿಗೆ ಬಿದ್ದಿರುವ ಬಗ್ಗೆ ಟಿಪ್ಪರ್ ಲಾರಿಯ ಮಾಲಕ ಸುಜಿತ್ ಎಂಬವರು ಕರೆ ಮಾಡಿದಂತೆ ತನ್ನ ಕ್ರೇನ್ ನಲ್ಲಿ ಟಿಪ್ಪರ್ ಲಾರಿಯನ್ನು ಮೇಲಕ್ಕೆತ್ತಲು ಕ್ರೇನ್  ಹಾಗೂ  ಜೆಸಿಬಿ ಬಂದಿರುವುದಾಗಿ ತಿಳಿಸಿದ್ದಾನೆ.ಟಿಪ್ಪರ್ ಲಾರಿಯ ಪಕ್ಕದಲ್ಲಿ ನಿಂತುಕೊಂಡಿದ್ದ ಆರೋಪಿಗಳಾದ ಸುಜಿತ್ ಮತ್ತು  ಅಜಿತ್ ಎಂಬವರನ್ನು ವಿಚಾರಿಸಿದಾಗ ತಾವು ಪಕ್ಕದ ನದಿಯಿಂದ ಸಾಮಾನ್ಯ ಮರಳನ್ನು ತೆಗೆದು  ಟಿಪ್ಪರ್ ನಲ್ಲಿ ಸಾಗಾಟ ಮಾಡುತ್ತಿದ್ದಾಗ ರಾತ್ರಿ ಸುಮಾರು 9ಗಂಟೆಗೆ ಮಳೆಯ ಕಾರಣ ಟಯರ್ ಕೆಸರಿನಲ್ಲಿ ಹೂತು ಟಿಪ್ಪರ್ ಲಾರಿಯು ಪಲ್ಟಿಯಾಗಿದ್ದಾಗಿ, ಲಾರಿಯಲ್ಲಿ ತುಂಬಿಸಿದ್ದ ಮರಳು ಚೆಲ್ಲಿರುವುದಾಗಿ ತಿಳಿಸಿದ್ದಾರೆ
 ಎಳಿಂಜೆ ಗ್ರಾಮದ ಪಟ್ಟೆ ಕ್ರಾಸ್ ಎಂಬಲ್ಲಿ ಶಾಂಭವಿ ನದಿಯಿಂದ ಯಾವುದೇ ಪರವಾನಿಗೆ ಇಲ್ಲದೇ ನದಿಯಿಂದ ಸಾಮಾನ್ಯ ಮರಳನ್ನು ಕಳವು ಮಾಡಿ ಅದನ್ನು ಟಿಪ್ಪರ್   ಲಾರಿಯಲ್ಲಿ ಮಾರಾಟದ ಬಗ್ಗೆ ಸಾಗಾಟ ಮಾಡುತ್ತಿದ್ದ ಬಗ್ಗೆ ಆರೋಪಿಗಳ ವಿರುದ್ಧ ಮುಲ್ಕಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿರುವ ಪ್ರದೇಶಗಳಿಗೆ ಗಣಿ ಭೂ ವಿಜ್ಞಾನ ಇಲಾಖೆ  ಭೇಟಿ ನೀಡಿ ಪರೀಶೀಲನೆ ನಡೆಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ