-->


ಜಿಲ್ಲಾ ಮಟ್ಟದ ಕೋ ಕೋ ಪಂದ್ಯಾಟ,ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆ ಪ್ರಥಮ

ಜಿಲ್ಲಾ ಮಟ್ಟದ ಕೋ ಕೋ ಪಂದ್ಯಾಟ,ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆ ಪ್ರಥಮ

ಬಜಪೆ:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪ ನಿರ್ದೇಶಕರ ಕಛೇರಿ, ಮಂಗಳೂರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಮತ್ತು ಸರಕಾರಿ ಪ್ರೌಢಶಾಲೆ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ಕೋಕೋ ಪಂದ್ಯಾಟವು ಸರಕಾರಿ ನಯನಾಡು ಇಲ್ಲಿ ನಡೆಯಿತು. ಬಾಲಕಿಯರ ವಿಭಾಗದಲ್ಲಿ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಪ್ರಥಮ ಸ್ಥಾನವನ್ನು ಪಡೆಯಿತು .ಸರಕಾರಿ ಪ್ರೌಢಶಾಲೆ ನಯನಾಡು ದ್ವಿತೀಯ ಸ್ಥಾನವನ್ನು ಪಡೆಯಿತು ಬಾಲಕರ ವಿಭಾಗದಲ್ಲಿ ವಿವೇಕಾನಂದ ಪ್ರೌಢಶಾಲೆ ಪುತ್ತೂರು ಪ್ರಥಮ ಸ್ಥಾನ ಹಾಗೂ  ಇನ್ಫೆಂಟ್ ಮೇರಿ ಪ್ರೌಢಶಾಲೆ ಕಾಟಿಪಳ್ಳ ದ್ವಿತೀಯ ಸ್ಥಾನ ಪಡೆಯಿತು.