-->
ಅರಸು ಪ್ರಶಸ್ತಿ -2024ಗೆ ಅರ್ಜಿ ಆಹ್ವಾನ

ಅರಸು ಪ್ರಶಸ್ತಿ -2024ಗೆ ಅರ್ಜಿ ಆಹ್ವಾನ

ಹಳೆಯಂಗಡಿ:ಅರಸು ಪ್ರಶಸ್ತಿ -2024ಗೆ ಅರ್ಜಿ ಆಹ್ವಾನ 
ದ.ಕ ಜಿಲ್ಲೆಯ ಮುಲ್ಕಿ ಅರಸು ಕಂಬಳ ಡಿಸೆಂಬರ್ 22ರಂದು ನಡೆಯಲಿದ್ದು ಈ ಸಂದರ್ಭದಲ್ಲಿ ಮುಲ್ಕಿ ಅರಮನೆ ಚಾರಿಟೇಬಲ್ ಟ್ರಸ್ಟ್ ಮತ್ತು ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಜಂಟಿ ಆಶ್ರಯದಲ್ಲಿ ಅರಸು ಪ್ರಶಸ್ತಿ-ಪ್ರಧಾನ ಕಾರ್ಯಕ್ರಮ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದು ಮುಲ್ಕಿ ಸೀಮೆ ಸಾವಂತ ಅರಸರಾದ ಶ್ರೀ ಎಂ ದುಗ್ಗಣ್ಣ ಸಾವಂತರು ತಿಳಿಸಿರುತ್ತಾರೆ.
ಈ ಪ್ರಶಸ್ತಿ ಆಯ್ಕೆಗಾಗಿ ಶ್ರೀ ಎಂ ದುಗ್ಗಣ್ಣ ಸಾವಂತರವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯೊಂದು ರಚನೆಯಾಗಿದ್ದು ಅರ್ಜಿ ಸಾಧಕರನ್ನು ಸಮಿತಿಯು ಆಯ್ಕೆ ಮಾಡಲಿದೆ.
ಸಾಧನ ಪ್ರಶಸ್ತಿ (ಮರಣೋತ್ತರ), ಸಾಮಾಜಿಕ ಕ್ಷೇತ್ರ, ವೈದ್ಯಕೀಯ ಕ್ಷೇತ್ರ, ಕಂಬಳ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ, ಜನಪದ ಕ್ಷೇತ್ರ, ಮತ್ತು ಸಂಘ ಸಂಸ್ಥೆಗಳು, ಕೃಷಿ ಕ್ಷೇತ್ರ ಗುರುತಿಸಿ ಪ್ರಶಸ್ತಿ ನೀಡಲಾಗುವುದು. ಮುಲ್ಕಿ ಅರಮನೆಯ ಒಂಬತ್ತು ಮಾಗಣೆ ವ್ಯಾಪ್ತಿಯ 32 ಗ್ರಾಮದ ಆಸಕ್ತರು ಸ್ವ - ಅರ್ಜಿಯ ಮುಖಾಂತರ ಅಥವಾ ಇತರರ ಶಿಫಾರಸಿನ ಮೂಲಕ ಅರ್ಜಿಯನ್ನು ದಿನಾಂಕ 15-10-2024ರ ಒಳಗಾಗಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಹರಿ ಓಂ ಬಿಲ್ಡಿಂಗ್ ಹಳೆಯಂಗಡಿ ಇಲ್ಲಿ ತಲುಪಿಸಬಹುದು, ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಟ್ರಸ್ಟಿನ ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article