ಕ್ರೀಡೆಯ ಜೊತೆಗೆ ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಳ್ಳಿ-ಮಮತಾ ಶೆಟ್ಟಿ
Sunday, September 8, 2024
ಮುಲ್ಕಿ: ಶಿಮಂತೂರು ಶ್ರೀ ಆದಿ ಜನಾರ್ಧನ ಸೇವಾ ಯುವಕ ವೃಂದದ ವತಿಯಿಂದ ಗಣೇಶ ಚತುರ್ಥಿ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ ಶ್ರೀ ಆದಿ ಜನಾರ್ಧನ ದೇವಸ್ಥಾನದ ಹೊರಾಂಗಣದಲ್ಲಿ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಕಿಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಮಮತಾ ಶೆಟ್ಟಿ ಮಾತನಾಡಿ ಯುವ ಜನಾಂಗ ಕ್ರೀಡೆಯ ಜೊತೆಗೆ ಧಾರ್ಮಿಕ ಮನೋಭಾವದ ಮೂಲಕ ಶಿಸ್ತು ಸಂಸ್ಕಾರ ಸಂಸ್ಕೃತಿ ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಎಂದರು
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸೀತಾರಾಮ ಭಟ್, ಸುಧನ್ವ ಭಟ್, ದೇವಸ್ಥಾನದ ಮಾಜೀ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ದಿನೇಶ್ಚಂದ್ರ ಅಜಿಲ, ಹರೀಶ್ ಶೆಟ್ಟಿ, ಶ್ರೀ ಆದಿ ಜನಾರ್ದನ ಸೇವಾ ಯುವಕ ವೃಂದದ ಅಧ್ಯಕ್ಷ ದೀಪಕ್ ಮತ್ತಿತರರು ಉಪಸ್ಥಿತರಿದ್ದರು. ಗೋಪಾಲ್ ಶಿಮಂತೂರು ನಿರೂಪಿಸಿದರು