ಕಟೀಲು ಕ್ಷೇತ್ರ ಶೈಕ್ಷಣಿಕ ಮತ್ತು ಯಕ್ಷಗಾನಗಳ ಪಾರಂಪರಿಕ ಕ್ಷೇತ್ರ - ಸುರೇಶ್ ಕಟೀಲ್
Friday, September 6, 2024
ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರವು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವಾಗಿದ್ದರೂ ಶೈಕ್ಷಣಿಕ ಕ್ಷೇತ್ರವಾಗಿಯೂ ಬೆಳೆಯುತ್ತಿದೆ. ಯಕ್ಷಗಾನ ಕಲೆಗೆ ಹಲವು ಮೇಳಗಳ ಮೂಲಕ ಯಕ್ಷಗಾನ ಸೇವೆಯಾಟಗಳ ಮೂಲಕ ಭಕ್ತಾ ದಿಗಳ ಇಷ್ಟಾರ್ಥವನ್ನು ಈಡೇರಿಸುತ್ತಾ ಬಂದಿರುವುದು ಕ್ಷೇತ್ರ ದ ಮಹಿಮೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಪದವಿ ಕಾಲೇಜಿನ ನಿವೃತ್ತ ಉಪನ್ಯಾಸಕ ಸುರೇಶ್ ಕಟೀಲ್ ಹೇಳಿದರು.
ಅವರು ಕಟೀಲು ಸರಸ್ವತಿ ಸಭಾಭವನದಲ್ಲಿ ಸೆ.5ರಂದು ಜರಗಿದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ನ
ಶಿಕ್ಷಕ ಸಾಹಿತಿಗಳ ರಾಜ್ಯ ಸಮ್ಮೇಳನದಲ್ಲಿ ನಡೆದ ವಿಚಾರಗೋಷ್ಟಿಯಲ್ಲಿ ಕಟೀಲು ಕ್ಷೇತ್ರದ ಇತಿಹಾಸ ಹಾಗೂ ಕ್ಷೇತ್ರ ಪರಿಚಯ ವಿಷಯದಲ್ಲಿ ಮಾತನಾಡಿದರು.
ಉಡುಪಿ ಜ್ಯೋತಿಷ್ಯ ಪಂಡಿತ ಸಂಸ್ಕೃತ ವಿದ್ವಾಂಸ ರಘುಪತಿ ಭಟ್ 'ಹರಮುನಿದರೆ ಗುರುಕಾಯ್ವನು 'ಎಂಬ ವಿಚಾರದಲ್ಲಿ ಮಾತನಾಡಿ ಶಿಕ್ಷಕ ದಿನಾಚರಣೆಯ ಶುಭಾಶಯ ಸಲ್ಲಿಸಿದರು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ನ ಮೈಸೂರು ವಿಭಾಗೀಯ ಅಧ್ಯಕ್ಷ ರಂಗ ನಿರ್ದೇಶಕ ಎನ್.ವಿ.ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷ ಶ್ರೀ ಕಾಂತ ಕೆ.ವಿ.ಹೊಸಕೋಟೆ ಉಪಸ್ಥಿತರಿದ್ದರು.ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್
ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಶಿಕ್ಷಕಿ ಶಾಂತಾ ಪುತ್ತೂರು ಸಾಗತಿಸಿದರು.ಮಂಗಳೂರು ಸಮಿತಿ ಅಧ್ಯಕ್ಷೆ ಶಿಕ್ಷಕಿ ರೇಖಾ ಸುದೇಶ್ ರಾವ್ ಕಾರ್ಯಕ್ರಮ ನಿರೂಪಿಸಿದರು.ಅಪೂರ್ವ ಕಾರಂತ ವಂದಿಸಿದರು.