-->


ಸ್ವರ್ಣ ಸಂಭ್ರಮದ ಶ್ರೀ ಗಣಪತಿ ದೇವರಿಗೆ ರಜತ ಪೀಠ ಸಮರ್ಪಣೆ

ಸ್ವರ್ಣ ಸಂಭ್ರಮದ ಶ್ರೀ ಗಣಪತಿ ದೇವರಿಗೆ ರಜತ ಪೀಠ ಸಮರ್ಪಣೆ

ಕಿನ್ನಿಗೋಳಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.) ಕಿನ್ನಿಗೋಳಿ ಇದರ ಸ್ವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಶ್ರೀ ಗಣಪತಿ ದೇವರಿಗೆ ರಜತ ಪೀಠ ಸಮರ್ಪಿಸಲಾಗುತ್ತಿದೆ. 1974ರಲ್ಲಿ ಪ್ರಾರಂಭಗೊಂಡ ಕಿನ್ನಿಗೋಳಿಯ ಹೆಮ್ಮೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗೆ ಈ ಬಾರಿ 50ರ ಸಂಭ್ರಮ. ಈ ಸಂಭ್ರಮವನ್ನು ಸ್ಮರಣೀಯವಾಗಿಸಲು ಶ್ರೀ ವಿನಾಯಕನಿಗೆ ರಜತಪೀಠ ರಚನೆಯ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಸುಮಾರು 8-10 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ರಜತಪೀಠದ ರಚನೆಗೆ ಅನಿವಾಸಿ ಭಾರತೀಯ ಧನಂಜಯ ಶೆಟ್ಟಿಗಾರ್‌ ಸಂಚಾಲಕತ್ವದಲ್ಲಿ ನಿರ್ಮಾಣಗೊಳ್ಳುತ್ತಿದೆ.
ದುಬೈ ಸಮಿತಿಯ ಧನಂಜಯ ಶೆಟ್ಟಿಗಾರ್‌, ರಮೇಶ್‌ ಶೆಟ್ಟಿಗಾರ್‌, ಆನಂದ ಸಾಲ್ಯಾನ್‌ ನೇತೃತ್ವದಲ್ಲಿ, ಕುಶಲ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ, ಕೆ. ಭುವನಾಭಿರಾಮ ಉಡುಪ ಗೌರವಾಧ್ಯಕ್ಷತೆಯಲ್ಲಿ ಸಮಿತಿ ಸದಸ್ಯರ ಸಹಕಾರದೊಂದಿಗೆ ಈ ರಜತ ಪೀಠ ನಿರ್ಮಾಣಗೊಂಡಿದೆ. ಗಣೇಶೋತ್ಸವದ ದಿನ ಈ ರಜತ ಪೀಠ ಸಮರ್ಪಣೆಯಾಗಲಿದೆ ಎಂದು ಸಮಿತಿ ಸದಸ್ಯರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article