-->

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ
ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ
ಎನ್. ಎಸ್. ಎಸ್  ವಿದ್ಯಾರ್ಥಿಗಳನ್ನು ಸಮಾಜಮುಖಿಯನ್ನಾಗಿಸುತ್ತದೆ - ಪ್ರೊ. ಹರೀಶ್ ಆಚಾರ್ಯ ಪಿ

ಎನ್. ಎಸ್. ಎಸ್ ವಿದ್ಯಾರ್ಥಿಗಳನ್ನು ಸಮಾಜಮುಖಿಯನ್ನಾಗಿಸುತ್ತದೆ - ಪ್ರೊ. ಹರೀಶ್ ಆಚಾರ್ಯ ಪಿ

ಕಿನ್ನಿಗೋಳಿ:ಪೊಂಪೈ ಕಾಲೇಜು ಐಕಳದ  2024-25 ನೇ ಸಾಲಿನ ಎನ್. ಎಸ್. ಎಸ್ ಮತ್ತು ರೆಡ್ ರಿಬ್ಬನ್ ಕ್ಲಬ್ ಘಟಕಗಳ ಚಟುವಟಿಕೆಯ ಉದ್ಘಾಟನೆಯನ್ನು   ಗೋವಿಂದ ದಾಸ ಕಾಲೇಜು ಸುರತ್ಕಲ್ ಇಲ್ಲಿನ  ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಹರೀಶ್ ಆಚಾರ್ಯ ಪಿ ಅವರು ನೆರವೇರಿಸಿದರು.ಬಳಿಕ ಮಾತನಾಡಿದ ಅವರು  ರಾಷ್ಟ್ರ ಸೇವಾ ಯೋಜನೆಯು ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮವಾಗಿದೆ. ಎನ್ಎಸ್ಎಸ್ ನಿಂದ ಸಮುದಾಯ ಸೇವೆಯ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನವಾಗುತ್ತದೆ. ಇದು ವಿದ್ಯಾರ್ಥಿ ಯುವಜನರಲ್ಲಿ ಸಮುದಾಯ ಸೇವೆಯ ಬಗ್ಗೆ ಒಲವು ಮೂಡಿಸಿ ಚಲನಶೀಲರನ್ನಾಗಿಸುತ್ತದೆ ಎಂದರು. ಎನ್.ಎಸ್.ಎಸ್ ಧ್ವಜಾರೋಹಣ ಮಾಡಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ ಪುರುಷೋತ್ತಮ ಕೆ ವಿ  ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಹಿಸಿದ್ದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಲ್ಲಿ  ಕ್ರಿಯಾಶೀಲದಿಂದ ತೊಡಗಿಕೊಂಡು ಸ್ವಯಂ ಸೇವಕರಾಗಿ ಹಾಗೂ ನಾಯಕತ್ವದ  ಜವಾಬ್ದಾರಿಯನ್ನು ವಹಿಸಿರುವ ಹಿರಿಯ ಸ್ವಯಂ ಸೇವಕಿ ಕು. ಸ್ವಾತಿ ಪ್ರಭು ರವರನ್ನು ಈ ವೇಳೆ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.
ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಪೃಥ್ವಿರಾಜ್. ಬಿ, ಸಹ ಕಾರ್ಯಕ್ರಮಾಧಿಕಾರಿ ಶ್ರೀಮತಿ ಆಶಾಲತಾ ಕೆ ಜಿ, ಎನ್. ಎಸ್. ಎಸ್  ಘಟಕ ನಾಯಕ ನೆವಿಲ್ ಡಿ ಸೋಜಾ ಮತ್ತು ರಕ್ಷಿತಾ ನಾಯ್ಕ್ ತಂಡದ ನಾಯಕರಾದ ನಿತೀಶ್ ನಾಯ್ಕ್ ಮತ್ತು ಪ್ರತೀಕ್ಷಾ ಯು ಅಮೀನ್, ಸ್ವಯಂ ಸೇವಕ, ಸೇವಕಿಯರು, ಬೋಧಕ, ಬೋಧಕೇತರ  ವೃಂದದವರು ಉಪಸ್ಥಿತರಿದ್ದರು.ದ್ವಿತೀಯ ಬಿ.ಎ  ಬಸಮ್ಮ ಸ್ವಾಗತಿಸಿ, ದ್ವಿತೀಯ ಬಿಕಾಂ ಕೀರ್ತನಾ ಧನ್ಯವಾದವಿತ್ತರು.ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಗ್ಲೆನಿಟಾ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ