ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಶ್ರಯದಲ್ಲಿ ಸರಸ್ವತೀ ಸದನದಲ್ಲಿ ತಾ. ೧೩ರ ಶುಕ್ರವಾರದಿಂದ ತಾ.೧೫ರ ಭಾನುವಾರದ ವರೆಗೆ ಮೂರು ದಿನಗಳ ಕಾಲ ಗೋಉತ್ಪನ್ನಗಳ ಪ್ರದರ್ಶನ ಮಾರಾಟ, ಜಾಗೃತಿ ಮಾಹಿತಿ ಕಾರ‍್ಯಕ್ರಮ ’ನಂದಿನೀ ಗವ್ಯಮ್’ ನಡೆಯಲಿದೆ.
ರಾಜ್ಯದ ನಾನಾ ಕಡೆಗಳಿಂದ ಗೋಉತ್ಪನ್ನ ತಯಾರಕರು ಈ ಮೇಳಕ್ಕೆ ಬರಲಿದ್ದು, ದೇಸೀ ಗೋವಿನ ವಿವಿಧ ಉತ್ಪನ್ನಗಳಾದ ತುಪ್ಪ, ಗೋಮೂತ್ರದ ವಿವಿಧ ಔಷಧಿ, ಸೆಂಟ್, ಜೀವಾಮೃತ, ಪಂಚಗವ್ಯ ಉತ್ಪನ್ನಗಳು, ಕೃಷಿಗೆ ಅಗತ್ಯವಾದ ತಯಾರಿಕೆಗಳು, ಸಾಬೂನು ಹೀಗೆ ನಾನಾ ವಸ್ತುಗಳ ಪ್ರದರ್ಶನ ಇರಲಿದೆ. ಕಳೆದ ವರ್ಷವೂ ಕಟೀಲು ದೇಗುಲದ ವತಿಯಿಂದ ನಂದಿನೀ ಗವ್ಯಮ್ ಆಯೋಜಿಸಲಾಗಿತ್ತು. ಈ ಬಾರಿ ಮೂರು ದಿನಗಳ ಕಾಲ ನಡೆಯುವ ಈ ಕಾರ‍್ಯಕ್ರಮವನ್ನೂ ಉಪನ್ಯಾಸ, ತರಬೇತಿ ಹೀಗೆ ವಿಶಿಷ್ಟವಾಗಿ ಆಯೋಜಿಸಲಾಗಿದೆ.