ಕಿನ್ನಿಗೋಳಿಯ ಕೋಸ್ಟಲ್ ಹನಿ ಬೀ ಫಾರ್ಮ್ ನಲ್ಲಿ ಜೇನುಕೃಷಿ ತರಬೇತಿ ಕಾರ್ಯಕ್ರಮ
Tuesday, September 17, 2024
ಕಿನ್ನಿಗೋಳಿ : ಜೇನು ಕೃಷಿಯಿಂದ ಆರ್ಥಿಕ ಆದಾಯದ ಜೊತೆಗೆ ನಮ್ಮ ಕೈತೋಟಗಳೂ ಉತ್ತಮ ಇಳುವರಿ ಕೊಡುವಂತಾಗುತ್ತದೆ ಎಂದು ಜೇನುಕೃಷಿಕ ಪ್ರಜ್ವಲ್ ಶೆಟ್ಟಿಗಾರ್ ಹೇಳಿದರು.
ಅವರು ಕಿನ್ನಿಗೋಳಿಯ ಕೋಸ್ಟಲ್ ಹನಿ ಬೀ ಫಾರ್ಮ್ ನಲ್ಲಿ ಜೇನುಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾನು ಇನ್ನೂರಕ್ಕೂ ಹೆಚ್ಚು ಜೇನುಪೆಟ್ಟಿಗೆಗಳ ಮೂಲಕ ಹಾಗೂ ಜೇನಿನ ಉಪ ಉತ್ಪನ್ನಗಳ ಮೂಲಕ ಸಾಧಿಸಿದ ಯಶಸ್ಸಿನ ಬಗ್ಗೆ ಮಾಹಿತಿ ನೀಡಿದರು.
ಬ್ರಹ್ಮಾವರ ಕೃಷಿ ಕೇಂದ್ರದ ಕೀಟಶಾಸ್ತ್ರ ಪ್ರಾಧ್ಯಾಪಕ ಡಾ. ರೇವಣ್ಣ ರೇವಣ್ಣವರ, ತಾ.ಪಂ.ಮಾಜಿ ಸದಸ್ಯ ದಿವಾಲರ ಕರ್ಕೇರ, ಸುರೇಶ್ ಕರ್ಕೇರ, ಮಾಧವ ಶೆಟ್ಟಿಗಾರ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
30 ಕ್ಕೂ ಹೆಚ್ಚು ಮಂದಿ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದು, ತಾ. 21ರ ಭಾನುವಾರ ತೋಟಗಾರಿಕೆಯ ಸಹಯೋಗದೊಂದಿಗೆ ಮತ್ತೊಂದು ಜೇನುಕೃಷಿ ತರಬೇತಿ ಶಿಬಿರ ನಡೆಯಲಿದೆ ಎಂದು ಪ್ರಜ್ವಲ್ ಶೆಟ್ಟಿಗಾರ್ ತಿಳಿಸಿದ್ದಾರೆ.