-->


ಗೋಉತ್ಪನ್ನಗಳ ಪ್ರದರ್ಶನ ಮಾರಾಟ ಮೇಳ ನಂದಿನೀ ಗವ್ಯಮ್ ,ಸಮಾರೋಪ ಸಮಾರಂಭ

ಗೋಉತ್ಪನ್ನಗಳ ಪ್ರದರ್ಶನ ಮಾರಾಟ ಮೇಳ ನಂದಿನೀ ಗವ್ಯಮ್ ,ಸಮಾರೋಪ ಸಮಾರಂಭ

ಕಟೀಲು : ದೇಸೀ ಗೋವಿನ ಬಗ್ಗೆ ಕಾಳಜಿ, ಗೋಉತ್ಪನ್ನಗಳ ಬಳಕೆಯ ಬಗ್ಗೆ ಆಸಕ್ತಿ, ಜಾಗೃತಿ ಹೆಚ್ಚಿಸುವಲ್ಲಿ ಕಟೀಲು ದೇವಸ್ಥಾನದ ಪ್ರಯತ್ನ ಹಾಗೂ ಕಾರ್ಯ ಅಭಿನಂದನೀಯ. ಇತರ ದೇವಾಲಯಗಳೂ ಈ ನಿಟ್ಟಿನಲ್ಲಿ ಕೆಲಸ ಮಾಡುವಂತಾಗಲಿ ಎಂದು ಗೋಮಾತಾ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಡಾ. ಜೀವನ್ ಕುಮಾರ್ ವಿ. ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನಾಲ್ಕು ದಿನಗಳ ಕಾಲ ನಡೆದ ಗೋಉತ್ಪನ್ನಗಳ ಪ್ರದರ್ಶನ ಮಾರಾಟ ಮೇಳ ನಂದಿನೀ ಗವ್ಯಮ್ ಇದರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಕಟೀಲು ದೇಗುಲದ ಗೋಶಾಲೆಯಲ್ಲೂ ಗೋಉತ್ಪನ್ನಗಳ ತಯಾರಿಕೆಗೆ ಪ್ರಯತ್ನಿಸಲಾಗುವುದು. ಈಗಾಗಲೇ ದೇಗುಲದ ಭೋಜನಶಾಲೆ ಹಾಗೂ ಇತರೆಡೆಗಳ ತ್ಯಾಜ್ಯದಿಂದ ಸಾವಯವ ಗೊಬ್ಬರವನ್ನು ತಯಾರಿಸಲಾಗುತ್ತಿದ್ದು, ಜನಜಾಗೃತಿಯಲ್ಲಿ ಹಿನ್ನಲೆಯಲ್ಲಿ ಮಾರಾಟ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದರು.
ಗೋಉತ್ಪನ್ನಗಳ ತಯಾರಕರಾದ ಶಿವಪ್ರಸಾದ್ ಕೋಲಾರ, ನಾಗಮೂರ್ತಿ ಮೈಸೂರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಿಸಾನ್ ಘಟಕದ ಪುರುಷೋತ್ತಮ ಕೋಟ್ಯಾನ್, ಭುವನಾಭಿರಾಮ ಉಡುಪ, ಕಟೀಲು ಪ್ರೌಢಶಾಲೆಯ ಉಪಪ್ರಾಚಾರ್ಯ ರಾಜಶೇಖರ ಎನ್ ಮತ್ತಿತರರಿದ್ದರು.
ರಾಜ್ಯದ ನಾನಾ ಭಾಗಗಳ ಗೋಶಾಲೆಗಳಿಂದ ಗೋಉತ್ಪನ್ನಗಳ ಮಾರಾಟಗಾರರು ಈ ಮೇಳದಲ್ಲಿ ಭಾಗವಹಿಸಿದ್ದರು. 

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article