ದ.ಕ.ಜಿಲ್ಲಾ ಕಸಾಪದಿಂದ ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆ
Tuesday, September 17, 2024
ಕಟೀಲು : ಶಿಸ್ತಿಗೆ ಹೆಸರಾದ ದೂರದೃಷ್ಟಿಯ ಅನೇಕ ಕೆಲಸಗಳಿಂದ ಸದಾ ನೆನಪಿಸಬೇಕಾದವರು ಸರ್. ಮೋಕ್ಷಗುಡಂ ವಿಶ್ವೇಶ್ವರಯ್ಯನವರು ಎಂದು ಕಟೀಲು ದೇಗುಲದ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ ಹೇಳಿದರು.
ಅವರು ಕಟೀಲು ಸರಸ್ವತೀ ಸದನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಸಾಪ ಮೂಲ್ಕಿ ಘಟಕಗಳ ಸಹಯೋಗದಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಟೀಲು ಪ್ರೌಢಶಾಲೆಯ ಉಪಪ್ರಾಚಾರ್ಯ ರಾಜಶೇಖರ ಎನ್. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಕುರಿತಾಗಿ ಉಪನ್ಯಾಸ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥೆಯನ್ನು ಕಟ್ಟಿದವರಲ್ಲಿ ಓರ್ವರಾಗಿ ವಿಶ್ವೇಶ್ವರಯ್ಯನವರ ಸ್ಮರಣೆ ನಮ್ಮ ಕರ್ತವ್ಯ ಎಂದರು. ಅವರ ಕನಸಿನಂತೆ ಜಿಲ್ಲಾ ಕಸಾಪ ಅನೇಕ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಮೂಲ್ಕಿ ಕಸಾಪ ಅಧ್ಯಕ್ಷ ಮಿಥುನ ಕೊಡೆತ್ತೂರು ಸ್ವಾಗತಿಸಿದರು.
ಪ್ರಕಾಶ್ ಆಚಾರ್, ಜ್ಯೋತಿ ಉಡುಪ ಕನ್ನಡ ಗೀತೆಗಳನ್ನು ಹಾಡಿದರು. ಹೆರಿಕ್ ಪಾಯಸ್ ನಿರೂಪಿಸಿದರು.