ಕಟೀಲು ವಿಶ್ವಕರ್ಮ ಸಮಾಜ ಬಾಂಧವರ 11ನೆಯ ವರ್ಷದ ವಿಶ್ವಕರ್ಮ ಯಜ್ಞ ಹಾಗೂ ಪೂಜಾ ಕಾರ್ಯಕ್ರಮ
Tuesday, September 17, 2024
ಕಟೀಲು:ಕಟೀಲು ವಿಶ್ವಕರ್ಮ ಸಮಾಜ ಬಾಂಧವರ 11ನೆಯ ವರ್ಷದ ವಿಶ್ವಕರ್ಮ ಯಜ್ಞ ಹಾಗೂ ಪೂಜಾ ಕಾರ್ಯಕ್ರಮವು ಸೋಮವಾರದಂದು ಕಟೀಲು ದೇವರಗುಡ್ಡೆ ದುರ್ಗಾಗಣೇಶ ಸಭಾಗೃಹದಲ್ಲಿ ಜರಗಿತು. ಈ ಸಂದರ್ಭದಲ್ಲಿ ಕಿನ್ನಿಗೋಳಿಯಲ್ಲಿ ನಡೆದ ರಿಕ್ಷಾ ಅಪಘಾತದ ಸಂದರ್ಭ ತನ್ನ ತಾಯಿಯನ್ನು ರಕ್ಷಿಸುವ ಸಾಹಸ ತೋರಿದ ಕುಮಾರಿ ವೈಭವಿ ಆಚಾರ್ಯ ಇವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭ ಕಟೀಲು ವಿಶ್ವಕರ್ಮ ಕೂಡುವಳಿಕೆಯ ಸುಧಾಕರ ಆಚಾರ್ಯ, ಗಣೇಶ ಆಚಾರ್ಯ, ನಾರಾಯಣ ಆಚಾರ್ಯ, ಸದಾಶಿವ ಆಚಾರ್ಯ, ಶಿವರಾಮ ಆಚಾರ್ಯ, ಗುರುರಾಘವೇಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.