ತೋಕೂರು ದೇವಳಕ್ಕೆಶ್ರೀ ಸಾಯಿಈಶ್ವರ್ ಗುರೂಜಿ ಭೇಟಿ
Monday, September 16, 2024
ತೋಕೂರು:ಶ್ರೀ ಸಾಯಿಈಶ್ವರ್ ಗುರೂಜಿ ಯವರು 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ 94 ದಿನದ ಪ್ರದಕ್ಷಿಣೆ ಪ್ರಯುಕ್ತ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ವಿಶೇಷ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.ಈ ಸಂದರ್ಭ ದೇವಳದ ಪ್ರದಾನ ಅರ್ಚಕ ಟಿ ಕೆ ಮಧುಸೂಧನ್ ಆಚಾರ್, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಗುರುರಾಜ್ ಎಸ್. ಪೂಜಾರಿ, ಸಮಿತಿ ಸದಸ್ಯರುಗಳಾದ ಪುರುಷೋತ್ತಮ ಕೋಟ್ಯಾನ್, ಅಶೋಕ್ ಕುಂದರ್, ಸವಿತಾ, ದೇವಾಲಯದ ಸಿಬ್ಬಂದಿ ವರ್ಗ, ಗ್ರಾಮಸ್ಥರು, ಊರ ಪರ ಊರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.