ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ
Sunday, September 15, 2024
ಮೂಲ್ಕಿ:ಸಹಕಾರಿ ಬ್ಯಾಂಕ್‌ಗಳು ಹಾಗೂ ಸೊಸೈಟಿಗಳು ವರ್ಷಕ್ಕೊಂದರಂತೆ ತನ್ನ ಶಾಖೆಯನ್ನು ವಿಸ್ತರಿಸಿದಲ್ಲಿ ಸ್ಥಳೀಯವಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಕ್ರಾಂತಿಯನ್ನು ಸಾಧಿಸಲು ಸಾಧ್ಯವಿದೆ. ಪ್ರಿಯದರ್ಶಿನಿ ಸೊಸೈಟಿಯು ಈ ವರ್ಷ ೩೫ ಕೋಟಿಯ ಠೇವಣಿಯ ಗುರಿಯನ್ನು ಹೊಂದಿದೆ. ೧೯.೧೪ ಲಕ್ಷ ರೂ. ಲಾಭಾಂಶವಿದೆ. ಶೇರುದಾರರಿಗೆ ಶೇ.೬ ಡಿವೆಟೆಂಟ್ ನೀಡಲಾಗುವುದು. ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ವಸಂತ ಬೆರ್ನಾಡ್ ಹೇಳಿದರು.
ಅವರು ಮೂಲ್ಕಿ ಬಳಿಯ ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಸುಷ್ಮಾ ತಾರನಾಥ್, ಮಾಜಿ ಸೈನಿಕ ಆಲ್ವಿನ್ ಕ್ಲೆವೆನ್ ಕುಟಿನ್ಹೋ, ಇಂದಿರಾನಗರದ ಶ್ರೇಯಸ್ ಹಾಗೂ ಹೆಜಮಾಡಿಯ ಮಹಾಲಿಂಗೇಶ್ವರ ಸ್ವ ಸಹಾಯ ಸಂಘವನ್ನು ಗೌರವಿಸಲಾಯಿತು.
ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ ನಿರ್ದೇಶಕರಾದ ಗಣೇಶ್ ಅಮೀನ್ ಸಂಕಮಾರ್, ಧನಂಜಯ ಮಟ್ಟು, ಗೌತನ್ ಜೈನ್, ಶರತ್ ಶೆಟ್ಟಿ, ಉಮಾನಾಥ್ ಶೆಟ್ಟಿಗಾರ್, ಜೈಕೃಷ್ಣ ಕೋಟ್ಯಾನ್, ಗಣೇಶ್‌ಪ್ರಸಾದ್ ದೇವಾಡಿಗ, ಧನ್‌ರಾಜ್ ಕೋಟ್ಯಾನ್, ಮಿರ್ಜಾ ಅಹ್ಮದ್, ಶೆರಿಲ್ ಅಯೋನ ಐಮನ್, ಹರೀಶ್ ಪುತ್ರನ್, ನವೀನ್ ಸಾಲ್ಯಾನ್, ಸಂದೀಪ್, ವಿಜಯಕುಮಾರ್ ಸನಿಲ್, ತನುಜಾ ಶೆಟ್ಟಿ, ಅಧಿಕಾರಿಗಳಾದ ಸುದರ್ಶನ್, ಪ್ರಬಂಧಕರಾದ ಅಕ್ಷತಾ ಶೆಟ್ಟಿ, ಮೋಹನ್‌ದಾಸ್, ಪ್ರಜ್ಞಶ್ರೀ ಮತ್ತಿತರರು ಇದ್ದರು.
-೦-