ಬಡಗ ಎಕ್ಕಾರು ಶಾಲಾ ವಿದ್ಯಾರ್ಥಿನಿ ಮೌಲ್ಯ ಆರ್ ಶೆಟ್ಟಿ ರಾಜ್ಯ ಮಟ್ಟದ ನೆಟ್ ಬಾಲ್ ತಂಡಕ್ಕೆ ಆಯ್ಕೆ
Friday, September 20, 2024
ಬಜಪೆ:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಇದರ ವತಿಯಿಂದ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ ಕುಲಶೇಖರ ಇಲ್ಲಿ 14ರ ವಯೋಮಾನದ ಬಾಲಕಿಯರ ನೆಟ್ ಬಾಲ್ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು ಶಾಲಾ ವಿದ್ಯಾರ್ಥಿನಿಯಾದ ಮೌಲ್ಯ ಆರ್ ಶೆಟ್ಟಿ ಎಂಟನೇ ತರಗತಿ ಇವಳು ರಾಜ್ಯ ಮಟ್ಟದ ನೆಟ್ ಬಾಲ್ ತಂಡಕ್ಕೆ ಆಯ್ಕೆಯಾಗಿರುತ್ತಾಳೆ. ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವಿದ್ಯಾಲತ ತರಬೇತಿ ನೀಡಿರುತ್ತಾರೆ.