-->


ಗುತ್ತಿಗೆದಾರರಲ್ಲಿ ಲಂಚದ ಬೇಡಿಕೆ  ಕಿನ್ನಿಗೋಳಿ ಪಟ್ಟಣ ಪಂಚಾಯತ್ ಗೆ ಲೋಕಾಯುಕ್ತ ದಾಳಿ,ಇಬ್ಬರು ಪೊಲೀಸ್ ಬಲೆಗೆ

ಗುತ್ತಿಗೆದಾರರಲ್ಲಿ ಲಂಚದ ಬೇಡಿಕೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಗೆ ಲೋಕಾಯುಕ್ತ ದಾಳಿ,ಇಬ್ಬರು ಪೊಲೀಸ್ ಬಲೆಗೆ

ಕಿನ್ನಿಗೋಳಿ:ಕಾಮಗಾರಿಯ ಬಿಲ್ಲು ಮಂಜೂರಾತಿಗೆ ಗುತ್ತಿಗೆದಾರರಲ್ಲಿಯೇ ಲಂಚದ ಬೇಡಿಕೆ ಇಟ್ಟು,ಲಂಚದ ಹಣ ಸ್ವೀಕರಿಸುತ್ತಿರುವಾಗಲೇ   ಪಟ್ಟಣ ಪಂಚಾಯತ್ ನ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯಾಧಿಕಾರಿ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ಘಟನೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನಲ್ಲಿ ಗುರುವಾರದಂದು ಸಂಜೆ ನಡೆದಿದೆ.

ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಸ್.ಕೋಡಿ  ಸರಕಾರಿ ಕೆರೆಯನ್ನು ಅಭಿವೃದ್ದಿಪಡಿಸುವ ಕಾಮಗಾರಿಯನ್ನು ಗುತ್ತಿಗೆದಾರರೊಬ್ಬರು ವಹಿಸಿಕೊಂಡಿದ್ದು,ಗುತ್ತಿಗೆದಾರರು ಕಾಮಗಾರಿಯ ಬಿಲ್ಲು ಮಂಜೂರಾತಿ ಬಗ್ಗೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ಜೂನಿಯರ್ ಇಂಜಿನೀಯರ್ ನಾಗರಾಜು ಅವರಲ್ಲಿ ವಿಚಾರಿಸಿದ ಸಂದರ್ಭ ಇಂಜಿನೀಯರ್ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದು,ಗುರುವಾರದಂದು ಸಂಜೆ ಇಂಜಿನೀಯರ್ ನಾಗರಾಜು ಹಾಗೂ ಮುಖ್ಯಾಧಿಕಾರಿಯವರು ಲಂಚದ ಹಣವನ್ನು ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಎಸ್.ಕೋಡಿ ಸರಕಾರಿ ಕೆರೆ ಅಭಿವೃದ್ದಿ ಕಾಮಗಾರಿಯ 9,77,154 ಮೊತ್ತದ ಬಿಲ್ಲು ಮಂಜೂರಾತಿಯ ಬಗ್ಗೆ ವಿಚಾರಿಸಿದ ಗುತ್ತಿಗೆದಾರರ ಬಳಿ ಜೂನಿಯರ್ ಇಂಜಿನೀಯರ್ ನಾಗರಾಜು 37,000 ಹಾಗೂ ಮುಖ್ಯಾಧಿಕಾರಿಯವರಿಗೆ 15,000 ಲಂಚ  ನೀಡಬೇಕೆಂದು ಹಣದ ಬೇಡಿಕೆ ಯನ್ನು ಇಟ್ಟಿದ್ದರು.ಅಲ್ಲದೆ ಮುಂಚಿತವಾಗಿ ಇಂಜಿನೀಯರ್ ನಾಗರಾಜು ಅವರು 7,000ಹಣವನ್ನು ಗುತ್ತಿಗೆದಾರರಿಂದ ಪಡೆದುಕೊಂಡಿದ್ದರು.ಗುರುವಾರದಂದು ಸಂಜೆ ಇಂಜಿನೀಯರ್ ನಾಗರಾಜು 30,000 ಮತ್ತು ಮುಖ್ಯಾಧಿಕಾರಿ 15,000 ಲಂಚದ ಹಣವನ್ನು ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕಾರ್ಯಾಚರಣೆಯಲ್ಲಿ ಕರ್ನಾಟಕ ಲೋಕಾಯುಕ್ತ ಮಂಗಳೂರು ಪೊಲೀಸ್ ಅಧಿಕ್ಷಕ ಎಂ.ಎ ನಟರಾಜ,ಮಂಗಳೂರು ಲೋಕಾಯುಕ್ತಪೊಲೀಸ್ ಠಾಣೆಯ ಪೊಲೀಸ್ ಉಪಾಧಿಕ್ಷಕ ಡಾ.ಗಾನ.ಪಿ ಕುಮಾರ್,ಪೊಲೀಸ್ ನಿರೀಕ್ಷಕ ಅಮಾನುಲ್ಲಾ.ಎ,ಸುರೇಶ್ ಕುಮಾರ್  ಪಿ,ಚಂದ್ರಶೇಖರ್ ಕೆ.ಎನ್ ,ಚಂದ್ರಶೇಖರ್ ಸಿ.ಎಲ್ ,ಸಿಬ್ಬಂದಿವರ್ಗ ಜೊತೆ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article