ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಗೆ 16.56 ಕೋಟಿ ನಿವ್ವಳ ಲಾಭ
Thursday, September 19, 2024
ಬಜಪೆ:ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ (ನಿ) ಬಜಪೆ ಇದರ ವಾರ್ಷಿಕ ಸಾಮಾನ್ಯ ಸಭೆಯು ಬುಧವಾರದಂದು ಬಜಪೆ ಕೇಂದ್ರ ಕಛೇರಿಯ “ಸಹಕಾರ ವಜ್ರ” ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು ಇವರ ಅಧ್ಯಕ್ಷತೆಯಲ್ಲಿ ಜರಗಿತು.
2023-24 ನೇ ಸಾಲಿನ ಅಂತ್ಯಕ್ಕೆ ಬ್ಯಾಂಕಿನ ನಿವ್ವಳ ಲಾಭ 16.56 ಕೋಟಿ ಆಗಿದ್ದು, ಸದಸ್ಯರಿಗೆ 20 ಶೇಕಡಾ ಡಿವಿಡೆಂಟ್ ಘೋಷಣೆ ಮಾಡಿರುತ್ತದೆ. ಬ್ಯಾಂಕಿನ ದುಡಿಯುವ ಬಂಡವಾಳ ರೂ.600 ಕೋಟಿ ಆಗಿದ್ದು, ರೂಪಾಯಿ 351 ಕೋಟಿ ಠೇವಣಾತಿ ಹೊಂದಿರುತ್ತದೆ. 2023-24 ರ ಅಂತ್ಯಕ್ಕೆ ರೂಪಾಯಿ 238 ಕೋಟಿ ಹೊರಬಾಕಿ ಸಾಲ ಇದ್ದು ರೂಪಾಯಿ 51 ಕೋಟಿ ಪಾಲು ಬಂಡವಾಳ ಹೊಂದಿರುತ್ತದೆ. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕಿ ಶ್ರೀಮತಿ ಪ್ರೆಸಿಲ್ಲಾ ಪಿರೇರಾರವರು 2023-24 ನೇ ಸಾಲಿನ ಲೆಕ್ಕ ಪತ್ರಗಳ ವರದಿ ಮಂಡನೆ ಮಾಡಿದರು. ಬ್ಯಾಂಕಿನ ಉಪಾಧ್ಯಕ್ಷ ವಸಂತ, ನಿರ್ದೇಶಕರುಗಳಾದ ಡಾ.ಎಂ ಎನ್ ರಾಜೇಂದ್ರ ಕುಮಾರ್, ಡೆನಿಸ್ ಡಿ ಸೋಜ, ಸೈನಿ ಡಿ ಸೋಜ, ರಿತೇಶ್ ಶೆಟ್ಟಿ, ಭಾಸ್ಕರ ಮಲ್ಲಿ, ಗೀತಾ ಕೆ ಅಮೀನ್, ಮೋಹನ್, ಮೊಹಮ್ಮದ್ ಶರೀಪ್, ಸವಿತಾ, ಗೀತಾ, ಕಿರಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಬ್ಯಾಂಕಿನ ಸದಸ್ಯರು ಬ್ಯಾಂಕಿನ ಕಾರ್ಯ ಸಾಧನೆಗಳ ಬಗ್ಗೆ ಶ್ಲಾಘನೆಯ ಮಾತುಗಳನ್ನು ಆಡಿ ಇನ್ನೂ ಹೆಚ್ಚಿನ ಸಾಧನೆಗಳು ಬ್ಯಾಂಕಿನಿಂದ ನಡೆಯುವರೇ ಸೂಕ್ತ ಸಲಹೆ ಮಾರ್ಗದರ್ಶನಗಳನ್ನು ನೀಡಿದರು.