
ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಜೃಂಭಣೆಯ ಶ್ರೀ ಕೃಷ್ಣ ಜನ್ಮಾಷ್ಟಮಿ
Monday, August 26, 2024
ಹಳೆಯಂಗಡಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ನಡೆಯಿತು
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಪ್ರಾತಃಕಾಲ ಕ್ಷೇತ್ರದ ಅರ್ಚಕರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ, ನವಕಪ್ರಧಾನ, ಕಲಶಾಭಿಷೇಕ ನಡೆಯಿತು
ಬಳಿಕ ಶ್ರೀ ಕೃಷ್ಣ ದೇವರಿಗೆ ತುಳಸಿ ಅಲಂಕಾರ, ನವಧಾನ್ಯಾಲಂಕಾರ, ಭಕ್ಷ್ಯಾಲಂಕಾರ, ಪರಂಪರಾ ಯಕ್ಷಗಾನ ವೇಷಾಲಂಕಾರ, ವಸ್ತ್ರಾಲಂಕಾರ ಸರ್ವಾಲಂಕಾರ ಮೂಲಕ ವಿಶೇಷ ಪೂಜೆ ನಡೆಯಿತು
ಶ್ರೀ ಕೃಷ್ಣ ದೇವರಿಗೆ ಸಾಮ ವೇದ ಪಾರಾಯಣ, ಯೋಗ ಪ್ರದರ್ಶನ, ಕೊಳಲು ವಾದನ ಭಜನಾ ಸಂಕೀರ್ತನೆ ಮೂಲಕ ವಿಶೇಷ ಆರಾಧನೆ ನಡೆಯಿತು.
ಶ್ರೀ ಕೃಷ್ಣ ದೇವರಿಗೆ ಯಕ್ಷಗಾನಾರ್ಚನೆ, ಗಿಟಾರ್ ವಾದನ, ಹರಿಕಥಾ ಸತ್ಸಂಗ,ಸ್ಯಾಕ್ಸೋಫೋನ್ ವಾದನ, ಕೃಷ್ಣವೇಷ ದಾರಿ ಮಕ್ಕಳಿಂದ ಮೊಸರು ಕುಡಿಕೆ ಉತ್ಸವ, ಶ್ರೀ ಗೋಪಾಲಕೃಷ್ಣ ಪಾಂಡುರಂಗ ಸ್ವಾಮಿಗೆ ಅಷ್ಟಾವಧಾನ ಸೇವೆ ಸಹಿತ ಮಹಾಪೂಜೆ ಪ್ರಸಾದ ವಿತರಣೆ ಮಹಾ ಅನ್ನಸಂತರ್ಪಣೆ ನಡೆಯಿತು
ಈ ಸಂದರ್ಭ ದೇವಸ್ಥಾನದ ಧರ್ಮದರ್ಶಿ ಯಾಜಿ ನಿರಂಜನ ಭಟ್, ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.