ಶಿಮಂತೂರು: ಮಕ್ಕಳಲ್ಲಿ ಧರ್ಮ ಜಾಗೃತಿ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿ ಇರಲಿ -ನಿತಿನ್ ಕೆ ಶೆಟ್ಟಿ
Tuesday, August 27, 2024
ಮುಲ್ಕಿ: ಪಂಜಿನಡ್ಕ ಫ್ರೆಂಡ್ಸ್ ಹಾಗೂ ಶ್ರೀ ಆದಿ ಜನಾರ್ದನ ಸೇವಾ ಯುವಕ ಮಂಡಲದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಗ್ರಾಮೀಣ ಮಟ್ಟದ ವಿವಿಧ ಕ್ರೀಡಾಕೂಟ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ನಿತಿನ್ ಕೆ ಶೆಟ್ಟಿ ಮಾತನಾಡಿ ಕ್ರೀಡಾಕೂಟದಿಂದ ಮಕ್ಕಳಲ್ಲಿ ಧನಾತ್ಮಕ ಶಕ್ತಿ ನಿರ್ಮಾಣವಾಗಿ ದೈಹಿಕ ಹಾಗೂ ಶಾರೀರಿಕ ಬೆಳವಣಿಗೆ ಸಾಧ್ಯ, ಧರ್ಮ ಜಾಗೃತಿ ಮೂಲಕ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸೋಣ ಎಂದರು. ಮುಖ್ಯ ಅತಿಥಿಗಳಾಗಿ ವಿಷ್ಣುಮೂರ್ತಿ ಭಟ್, ಅತಿಕಾರಿಬೆಟ್ಟುಗ್ರಾ.ಪಂ ಸದಸ್ಯೆ ಪದ್ಮಿನಿ ವಿಜಯಶೆಟ್ಟಿ, ಪಂಜಿನಡ್ಕ ಫ್ರೆಂಡ್ಸ್ ನ ಕಿಶೋರ್ ಶೆಟ್ಟಿ ತೆಂಗಾಳಿ,ಶ್ರೀ ಆದಿ ಜನಾರ್ದನ ಸೇವಾ ಯುವಕ ಮಂಡಲದ ದೀಪಕ್ ಶಿಮಂತೂರು, ದೇವಸ್ಥಾನದ ಉಪ ಪ್ರಬಂಧಕಿ ರಕ್ಷಿತಾ ಮತ್ತಿತರರು ಉಪಸ್ಥಿತರಿದ್ದರು ಗೋಪಾಲ್ ಶಿಮಂತೂರು ನಿರೂಪಿಸಿದರು. ಬಳಿಕ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.