ಪುನರೂರು: ಸೇವಾ ಸಂಸ್ಥೆಯಿಂದ ಶಿಕ್ಷಣಕ್ಕೆ ಸಹಾಯ ಹಸ್ತ ನಿರಂತರ-ಸುರೇಶ್ ರಾವ್
Tuesday, August 6, 2024
ಮುಲ್ಕಿ:ಪುನರೂರು "ಸೇವಾನಿಧಿ ಟ್ರಸ್ಟ್ ವತಿಯಿಂದ ಶಿಕ್ಷಣಕ್ಕೆ ಸಹಾಯ ಹಸ್ತ ಕಾರ್ಯಕ್ರಮ ಪುನರೂರು ಶ್ರೀ ಬ್ರಹ್ಮಮುಗೇರ ದೈವಸ್ಥಾನದ ಪ್ರಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ
ಸುರೇಶ್ ರಾವ್ ನೀರಳಿಕೆ ಮಾತನಾಡಿ ಸೇವಾ ಸಂಸ್ಥೆಯ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯ ನಿರಂತರವಾಗಿ ನಡೆಯುತ್ತಿದೆ ಎಂದರು
ಈ ಸಂದರ್ಭ ಸೇವಾನಿಧಿ ಟ್ರಸ್ಟ್ ನ ಅಧ್ಯಕ್ಷ,ಪ್ರಶಾಂತ್ ಪುನರೂರು, ಕಾರ್ಯದರ್ಶಿ ಗೋವರ್ಧನ್ , ಟ್ರಸ್ಟಿ
ರವಿ ಶೆಟ್ಟಿ ಪುನರೂರು ಗುತ್ತು - ಸದಸ್ಯ ರಾಕೇಶ್ ಕೊರಗಪ್ಪ ಪುನರೂರು , ಗುರಿಕಾರರು ಶ್ರೀ ಬ್ರಹ್ಮ ಮುಗೇರ ದೈವಸ್ಥಾನದ ಗುರಿಕಾರ ಮುತ್ತಪ್ಪ , ಅಧ್ಯಕ್ಷ
ಪಿ ಹರೀಶ್ , ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಗೋಪಾಲಕೃಷ್ಣ ಆರ್,ಹೇಮಾನಂದ್ ಪುನರೂರು,ರವೀಂದ್ರ ದೇವಾಡಿಗ ಪುನರೂರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಮಂತೂರು
ಸಾಧಕರ ನೆಲೆಯಲ್ಲಿ ಪತ್ರಕರ್ತ ಪುನೀತ್ ಕೃಷ್ಣ ರವರನ್ನು ಗೌರವಿಸಲಾಯಿತು