-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
 ಇನ್ಸೂರೆನ್ಸ್ ಸೇವೆಗಳ ವ್ಯವಸ್ಥೆಯ ವಿಶೇಷ ಕಾರ್ಯಾಗಾರ

ಇನ್ಸೂರೆನ್ಸ್ ಸೇವೆಗಳ ವ್ಯವಸ್ಥೆಯ ವಿಶೇಷ ಕಾರ್ಯಾಗಾರ

ಹಳೆಯಂಗಡಿ:ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯಲ್ಲಿ  ಸಹಕಾರಿ ಧುರೀಣ ಮೊಳಹಳ್ಳಿ ಶಿವರಾಯರ ಜನ್ಮದಿನಾಚರಣೆಯ ಪ್ರಯುಕ್ತ ಸೊಸೈಟಿಯ ಎಲ್ಲಾ ಶಾಖೆಗಳಲ್ಲೂ ತೆರೆಯಲಿರುವ ಇನ್ಸೂರೆನ್ಸ್ ಸೇವೆಗಳ ವ್ಯವಸ್ಥೆಯ ವಿಶೇಷ ಕಾರ್ಯಾಗಾರದ ಉದ್ಘಾಟನೆಯು ಸೋಮವಾರದಂದು ನಡೆಯಿತು. ವಿಶೇಷ ಕಾರ್ಯಾಗಾರವನ್ನು ಪಣಂಬೂರು ಸಿಎಸ್‌ಐ ಕ್ರಿಸ್ತಕಾಂತಿ ಚರ್ಚ್‌ನ ಸಭಾ ಪಾಲಕಿ ರೆ. ಸಂಧ್ಯಾ ಖೋಡೆ ಅವರು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಜನಸ್ನೇಹಿಯಾಗಿ ಬೆಳೆದಿರುವ ಸೊಸೈಟಿಯು  ಗ್ರಾಹಕರಿಗೆ ಸಂತೃಪ್ತಿಯ ಸೇವೆ ನೀಡುತ್ತ ಬಂದಿದೆ. ಪ್ರಿಯದರ್ಶಿನಿ ಕೋ ಅಪರೇಟಿವ್ ಸೊಸೈಟಿಯು ಇನ್ನಷ್ಟು ಶಾಖೆಗಳನ್ನು ತೆರೆದು, ಉದ್ಯೋಗ, ಆರ್ಥಿಕತೆ, ಸಹಕಾರಿ ಮನೋಭಾವನೆ ಬೆಳೆಸಿ ಕ್ರಾಂತಿಕಾರಿ ಬದಲಾವಣೆ ತರಲಿ ಎಂದರು.
ಪ್ರಿಯದರ್ಶಿನಿ ಕೋ ಅಪರೇಟಿವ್ ಸೊಸೈಟಿಯ  ಅಧ್ಯಕ್ಷ ವೆಸಂತ ಬರ್ನಾಡ್ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. 
ಈಸಂದರ್ಭದಲ್ಲಿ ಮಂಗಳೂರಿನ ಮಾಸ್ಟರ್ ಮೈಂಡ್ ಎಂಟರ್‌ಪ್ರೈಸೆಸ್‌ನ ಶ್ರೀಶಾ ಕೆ.ಎಂ. ವರು ಸೊಸೈಟಿಯ ಒಡಂಬಡಿಕೆಯ ಕಡತವನ್ನು ಅಧ್ಯಕ್ಷರಿಗೆ ಹಸ್ತಾಂತರಿಸಿ, ಇನ್ಸೂರೆನ್ಸ್‌ನ ಮಹತ್ವದ ಬಗ್ಗೆ ಮಾಹಿತಿ ನೀಡಿದರು. 
ಹಳಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೋ. ಜಗದೀಶ್ ಶ್ರೀರಂಗ ಅವರು ಶುಭ ಹಾರೈಸಿದರು.
ವೇದಿಕೆಯಲ್ಲಿ ಸೊಸೈಟಿಯ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ನಿರ್ದೇಶಕರಾದ ಡಾ.ಗಣೇಶ್ ಅಮೀನ್ ಸಂಕಮಾರ್, ಜೈಕೃಷ್ಣ ಕೋಟ್ಯಾನ್, ಗೌತಮ್ ಜೈನ್, ಉಮಾಕಾಂತ್ ಶೆಟ್ಟಿಗಾರ್, ಮೊರ್ಜಾ ಅಹ್ಮದ್, ವಿಜಯ ಸನಿಲ್, ನವೀನ್ ಸಾಲ್ಯಾನ್ ಪಂಜ ಮತ್ತಿತರರು ಉಪಸ್ಥಿತರಿದ್ದರು. 
ಮುಖ್ಯಕಾರ್ಯನಿರ್ವಾಹಕಾಧಿಕಾರಿ ಸುದರ್ಶನ್ ಸ್ವಾಗತಿಸಿದರು, ಪ್ರಬಂಧಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. 

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ