ಮುಲ್ಕಿ: ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
Thursday, August 8, 2024
ಮುಲ್ಕಿ: ಬಳ್ಕುಂಜೆ ಸಮೀಪದ ಕರ್ನೀರೆ ಬಳಿ ಕಾಲೇಜು ವಿದ್ಯಾರ್ಥಿನಿ ಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ವಿದ್ಯಾರ್ಥಿನಿಯನ್ನು ಸ್ಥಳೀಯ ನಿವಾಸಿ ಪವಿತ್ರ (21) ಎಂದು ಗುರುತಿಸಲಾಗಿದೆ.
ಮೃತ ವಿದ್ಯಾರ್ಥಿನಿ ಪವಿತ್ರಕರ್ನಿರೆ ಹಾಲು ಡೈರಿ ಪಕ್ಕದ ಬಾಡಿಗೆ ಮನೆಯಲ್ಲಿ ಪವಿತ್ರ ಮನೆಯವರು ವಾಸಿಸುತ್ತಿದ್ದು, ಪವಿತ್ರ ಕಿನ್ನಿಗೋಳಿ ಸಮೀಪದ ಪಾಂಪೈ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರು
ಮಾನಸಿಕ ಖಿನ್ನತೆಯೇ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದ್ದು ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ