-->
ಮುಲ್ಕಿ: ಸಾರ್ವಜನಿಕ ಹಿಂದೂ ರುದ್ರ ಭೂಮಿ ಚಿತಾಗಾರಕ್ಕೆ ಸಿಲಿಕಾನ್ ಬಾಕ್ಸ್ ಅಳವಡಿಕೆ; ನೂತನ ಉದ್ಯಾನವನಕ್ಕೆ ಚಿಂತನೆ

ಮುಲ್ಕಿ: ಸಾರ್ವಜನಿಕ ಹಿಂದೂ ರುದ್ರ ಭೂಮಿ ಚಿತಾಗಾರಕ್ಕೆ ಸಿಲಿಕಾನ್ ಬಾಕ್ಸ್ ಅಳವಡಿಕೆ; ನೂತನ ಉದ್ಯಾನವನಕ್ಕೆ ಚಿಂತನೆ



ಮುಲ್ಕಿ:ಇಲ್ಲಿನ ಸಾರ್ವಜನಿಕ ಹಿಂದೂ ರುದ್ರಭೂಮಿಯು ಕಾರ್ನಾಡ್ ಉದ್ಯಮಿ ಅರವಿಂದ ಪೂಂಜಾ ನೇತೃತ್ವದಲ್ಲಿ ನವೀಕರಣಗೊಳ್ಳುತ್ತಿದೆ.
ಹಿಂದೂ ರುದ್ರ ಭೂಮಿಯ ಚಿತಾಗಾರ ನವೀಕರಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಈಗಾಗಲೇ ಒಂದು ಸಿಲಿಕಾನ್ ಬಾಕ್ಸ್ ಮಂಜೂರಾಗಿದ್ದು ಅಳವಡಿಕೆ ಕಾರ್ಯ  ಭರದಿಂದ ನಡೆಯುತ್ತಿದ್ದು ಬಳಿಕ ಇನ್ನೊಂದು ಚಿತಾಗಾರಕ್ಕೆ ಸಿಲಿಕಾನ್  ಬಾಕ್ಸ್ ಅಳವಡಿಸಲಾಗುವುದು.
ಹಿಂದೂ ರುದ್ರ ಭೂಮಿಯ ಮೇಲ್ಭಾಗದ ಹಳೆಯ ಕಾಲದ ಶೀಟುಗಳನ್ನು ತೆರವುಗೊಳಿಸಿ ನೂತನ ಶೀಟ್ ಗಳನ್ನು ಅಳವಡಿಸಲಾಗುವುದು ಹಾಗೂ ರುದ್ರ ಭೂಮಿಯ ಸುತ್ತಲೂ ಹೊಸ ಉದ್ಯಾನವನ ನಿರ್ಮಾಣ ಸಹಿತ ಸ್ವಚ್ಛತೆ ಕಾಪಾಡಲು ( ಕಸ, ಕಡ್ಡಿ ವಿಲೇವಾರಿಗೆ ) ಪ್ರತ್ಯೇಕ ಬಾಕ್ಸ್ ನಿರ್ಮಾಣದ ಯೋಜನೆ ಇದೆ ಎಂದು ಸಾರ್ವಜನಿಕ ಹಿಂದೂ ರುದ್ರ ಭೂಮಿಯ ಸಂಚಾಲಕರಾದ ಅರವಿಂದ ಪೂಂಜ ಮಾಧ್ಯಮಕ್ಕೆ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article