-->


ಸೆ.1 - ರೋಶನ್ ನೆಲ್ಲಿಗುಡ್ಡೆ ನಿರ್ದೇಶನದ ಕೊಂಕಣಿ ಫಿಲ್ಮ್‌ನ ಟೈಟಲ್ ಬಿಡುಗಡೆ

ಸೆ.1 - ರೋಶನ್ ನೆಲ್ಲಿಗುಡ್ಡೆ ನಿರ್ದೇಶನದ ಕೊಂಕಣಿ ಫಿಲ್ಮ್‌ನ ಟೈಟಲ್ ಬಿಡುಗಡೆ


ಕಿನ್ನಿಗೋಳಿ: ಪತ್ರಕರ್ತರಾಗಿ, ಕಿರುತೆರೆಯ ನಿರ್ಮಾಣ, ನಿರ್ದೇಶನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರೋಶನ್ ನೆಲ್ಲಿಗುಡ್ಡೆಯವರ ಚೊಚ್ಚಲ ನಿರ್ದೇಶನದ ಅನಿವಾಸಿ ಭಾರತೀಯ ಲಾನ್ಸಿ ಕುವೆಲ್ಲೋ ಮಂಗಳೂರು ಅವರ ನಿರ್ಮಾಣದ ಕೊಂಕಣಿ ಫಿಲ್ಮ್‌ನ ಟೈಟಲ್ ಬಿಡುಗಡೆ ಸಮಾರಂಭವು ಸೆಪ್ಟೆಂಬರ್ ೧ರಂದು ಸಂಜೆ 4 ಗಂಟೆಗೆ ಕಿನ್ನಿಗೋಳಿ ಮೂರುಕಾವೇರಿಯ ಬಳಿಯ ನೆಲ್ಲಿಗುಡ್ಡೆ ರೋಡ್ರಿಗಸ್ ಕಾಂಪೌಂಡ್‌ನ ಆವರಣದಲ್ಲಿ ನಡೆಯಲಿದೆ. 
ಸರಳ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ದಾಮಸ್‌ಕಟ್ಟೆ ಕಿರೆಂ ಚರ್ಚ್‌ನ ಧರ್ಮಗುರು ವ. ಫಾ.ಓಸ್ವಾಲ್ಡ್  ಮೊಂತೆರೋ, ಕಿನ್ನಿಗೋಳಿ ಸಂಜೀವಿನಿ ಸೇವಾ ಸಂಸ್ಥೆಯ ಆಗ್ನೆಸ್ ಫ್ರಾಂಕ್ ಬಿ.ಎಸ್., ಮಂಗಳೂರು ಉತ್ತರ ವಲಯದ ಕ್ಯಾಥೋಲಿಕ್ ಸಭಾದ ಅಧ್ಯಕ್ಷೆ ಮೆಲ್ರಿಡಾ ಜೇನ್ ರೋಡ್ರಿಗಸ್, ಕಿರೆಂ ಚರ್ಚ್‌ನ ಪಾಲನಾ ಮಂಡಳಿಯ ಉಪಾಧ್ಯಕ್ಷ ರೋಹನ್ ಡಿಕೋಸ್ತ,ಮಂಗಳೂರು ಕರ್ನಾಟಕ ಬ್ಯಾಂಕ್‌ನ ಓಸ್ವಾಲ್ಡ್ ಜೋಸೆಫ್ ಡಿಸೋಜಾ, ಕಿನ್ನಿಗೋಳಿ ಲಯನ್ಸ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷೆ ಹಿಲ್ಡಾ ಡಿಸೋಜಾ, ನೆಲ್ಲಿಗುಡ್ಡೆ ಸೈಂಟ್ ಲಾರೆನ್ಸ್ ವಾರ್ಡಿನ ಅಧ್ಯಕ್ಷೆ ಎವುಜಿನ್ ಸಲ್ಡಾನ, ಮೂಲ್ಕಿ ಪ್ರೆಸ್ ಕ್ಲಬ್‌ನ ಅಧ್ಯಕ್ಷ ನಿಶಾಂತ್ ಶೆಟ್ಟಿ ಕಿಲೆಂಜೂರು, ಪತ್ರಕರ್ತ ಕಲಾವಿದ ನರೇಂದ್ರ ಕೆರೆಕಾಡು ಮತ್ತಿತರರು ಭಾಗವಹಿಸಲಿದ್ದಾರೆ.   
ಇಂದಿನ ಯುವ ಸಮುದಾಯಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ಜಾಗೃತಿ ಮೂಡಿಸುವ ಕಥಾನಕದ ಈ ಫಿಲ್ಮ್ ಕೊಂಕಣಿ ಹಾಗೂ ಕನ್ನಡ ಭಾಷೆಯಲ್ಲಿ ನಿರ್ಮಾಣ ಆಗಲಿದೆ. ಅನಿವಾಸಿ ಭಾರತೀಯ ಲಾನ್ಸಿ ಕುವೆಲ್ಲೋ ಮಂಗಳೂರು ಅವರ ಕುವೆಲ್ಲೋ ಬ್ರದರ್‍ಸ್ ಸಿನಿ ಕ್ರಿಯೇಶನ್ಸ್‌ನ ಬ್ಯಾನರ್‌ನಲ್ಲಿ ನಿರ್ಮಾಣವಾಗಲಿರುವ ಈ ಚಿತ್ರಕ್ಕೆ ಛಾಯಾಗ್ರಹಣ ಹರೀಶ್ ಪಿ. ಕೋಟ್ಯಾನ್, ಸಂಗೀತ ಗಗನ್ ಸುವರ್ಣ, ಸಾಹಿತ್ಯ ವಿಲ್ಸನ್ ಕಟೀಲು, ಸಂಕಲನ ದೇವಿಪ್ರಕಾಶ್, ಕಾರ್ಯಕಾರಿ ನಿರ್ಮಾಪಕರಾಗಿ ವಿನ್ಸೆಂಟ್ ಮಂಗಳೂರು, ನಿರ್ಮಾಣ ನಿರ್ವಹಣೆಯಲ್ಲಿ ವಿಲ್ಸನ್ ರೋಡ್ರಿಗಸ್ ಹಾಗೂ ಪಿಆರ್‌ಒ ಆಗಿ ನರೇಂದ್ರ ಕೆರೆಕಾಡು ಅವರು ಸಹಕಾರ ನೀಡಲಿದ್ದಾರೆ. ಸ್ಥಳೀಯ ಕಲಾವಿದರು ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದು ಕಥೆ ಹಾಗೂ ನಿರ್ದೇಶನದ ಜವಬ್ದಾರಿ ಹೊತ್ತಿರುವ ರೋಶನ್ ನೆಲ್ಲಿಗುಡ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article