-->


ಮುಲ್ಕಿ ಅರಮನೆ ವೆಲ್ ಫೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮುಲ್ಕಿ ನಗರ ಪಂಚಾಯತ್ ನ ನೂತನ ಅಧ್ಯಕ್ಷರಾದ ಸತೀಶ್ ಅಂಚನ್ ರಿಗೆ ಗೌರವ

ಮುಲ್ಕಿ ಅರಮನೆ ವೆಲ್ ಫೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮುಲ್ಕಿ ನಗರ ಪಂಚಾಯತ್ ನ ನೂತನ ಅಧ್ಯಕ್ಷರಾದ ಸತೀಶ್ ಅಂಚನ್ ರಿಗೆ ಗೌರವ

ಮುಲ್ಕಿ: ಅರಮನೆಯ ಧರ್ಮ ಚಾವಡಿಯಲ್ಲಿ  ಮುಲ್ಕಿ ಅರಮನೆ ವೆಲ್ ಫೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮುಲ್ಕಿ ನಗರ ಪಂಚಾಯತ್ ನ ನೂತನ ಅಧ್ಯಕ್ಷರಾದ ಸತೀಶ್ ಅಂಚನ್ ರವರನ್ನು ಗೌರವಿಸಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸೀಮೆಯ ಅರಸರಾದ  ದುಗ್ಗಣ್ಣ ಸಾವಂತರು ಮಾತನಾಡಿ ನಗರ ಪಂಚಾಯತ್ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವುದೊಂದಿಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸರಕಾರದ ಸವಲತ್ತುಗಳನ್ನು ಒದಗಿಸಲು ಪ್ರಯತ್ನಿಸಿದರೆ ಸಾಧಕರಾಗಲು ಸಾಧ್ಯ ಎಂದರು
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ  ಆಳ್ವಾಸ್ ಸಂಸ್ಥೆಯ ಮುಖ್ಯಸ್ಥ ವಿವೇಕ್ ಆಳ್ವ, ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟ್ ಬ್ಯಾಂಕ್ ನ ಅಧ್ಯಕ್ಷ ವಸಂತ್ ಬೆರ್ನಾಡ್, ಜಾನಪದ  ವಿದ್ವಾಂಸ ಗಣೇಶ್ ಅಮೀನ್ ಸಂಕಮಾರ್, ಅರಮನೆ ವೆಲ್ಫೇರ್ ಟ್ರಸ್ಟ್ ನ ಮುಖ್ಯಸ್ಥ ಗೌತಮ್ ಜೈನ್,   ಚಂದ್ರಶೇಖರ್ ಕಾಸಪ್ಪಯ್ಯನವರ ಮನೆ, ವಿನೋದ್ ಎಸ್ ಸಾಲ್ಯಾನ್,ಮಹಿಮ್ ಹೆಗ್ಡೆ,ನವೀನ್ ಪುತ್ರನ್, ಸತೀಶ್ ಶೆಟ್ಟಿ, ಹರ್ಷಿತ್ ಸಾಲ್ಯಾನ್ , ಸತೀಶ್ ಭಟ್ ಉಪಸ್ಥಿತರಿದ್ದರು. 
ಇದೇ ಸಂದರ್ಭದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ಅರಸು ಕಂಬಳದ ಪೂರ್ವಭಾವಿಯಾಗಿ ನಡೆಯುವ ವಿವಿಧ ಜಾನಪದ ಸ್ಪರ್ಧೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಬಗ್ಗೆ ಚರ್ಚಿಸಲಾಯಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article