ಮುಲ್ಕಿ ಹೋಬಳಿ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ -2024
Saturday, August 31, 2024
ಮುಲ್ಕಿ: ಚಿತ್ರಾಪು ಕೆಎಸ್ ರಾವ್ ಸ್ಮಾರಕ ಸರಕಾರಿ ಪ್ರೌಢಶಾಲೆ ಆಶ್ರಯದಲ್ಲಿ ಮುಲ್ಕಿ ಹೋಬಳಿ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ -2024 ಯು ಶಾಲೆಯ ವೇದಿಕೆಯಲ್ಲಿ ನಡೆಯಿತು
ಕಾರ್ಯಕ್ರಮವನ್ನು ಮುಲ್ಕಿ ನ. ಪಂ ಸದಸ್ಯೆ ರಾಧಿಕಾ ಕೋಟ್ಯಾನ್ ಉದ್ಘಾಟಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್ ವಹಿಸಿ ಮಾತನಾಡಿ ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಪೂರಕ ಎಂದರು
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನಗರ ಪಂಚಾಯತ್ ಸದಸ್ಯರಾದ ಯೋಗೀಶ್ ಕೋಟ್ಯಾನ್,
ಮಂಗಳೂರು ಉತ್ತರ ಸಮನ್ವಯ ಅಧಿಕಾರಿ ವೇದಾವತಿ , ಬಾಲಚಂದ್ರ ಸನಿಲ್, ರಮೇಶ್ ಅಮೀನ್ , ಯುವಕ ಮಂಡಲದ ಅಧ್ಯಕ್ಷ ತುಷಾರ್, ಧನಪಾಲ್ ಪುತ್ರನ್ , ಮಂಜುನಾಥ ಸನಿಲ್, ಇವತ್ತಿ ಮಂಡಲದ ಅಧ್ಯಕ್ಷೆ ಕುಮಾರಿ, ಹಳೆ ವಿದ್ಯಾರ್ಥಿ ಸಂಘದ ನಿತೇಶ್ ಬಂಗೇರ , ಸುಜಾತ, ಎಸ್ ಡಿ ಎಂ ಸಿ, ಅಧ್ಯಕ್ಷೆ ಸಂಧ್ಯಾ ಸವಿತಾ,ಸಿ.ಆರ್ ಪಿ ವೀಣಾ, ರಾಮದಾಸ್ , ವಿವಿಲಾ ಮತ್ತಿತರರು ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಸಂಘಟಕರಿಗೆ ಅಭಿನಂದನಾ ಪತ್ರವನ್ನು ಕ್ಷೇತ್ರದ ಸಮನ್ವಯಾಧಿಕಾರಿಗಳು ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು
ಶಾಲಾ ಮುಖ್ಯೋಪಾಧ್ಯಾಯಿನಿ ಶಾಂತಿ ಪೈ ಸ್ವಾಗತಿಸಿದರು., ಪ್ರಜ್ವಲ್ ಆರ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು