ಗಣೇಶೋತ್ಸವದಲ್ಲಿ ವಿಭಿನ್ನ ವೇಷದ ಮೂಲಕ ಆಶಕ್ತರಿಗೆ ನೆರವಿನ ಉದ್ದೇಶ ,ಆಮಂತ್ರಣ ಪತ್ರ ಬಿಡುಗಡೆ
Saturday, August 31, 2024
ಹಳೆಯಂಗಡಿ :ಸಹೃದಯಿ ಗೆಳೆಯರು ಪಡು, ಪಣಂಬೂರು 34ನೇ ವರ್ಷದ ಹಳೆಯಂಗಡಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅಶಕ್ತರಿಗೆ ನೆರವಾಗುವ ಉದ್ದೇಶದಿಂದ ಮೂರನೇ ಬಾರಿ ನಿಮ್ಮ ಮುಂದೆ ವಿಭಿನ್ನವೇಶ ಧರಿಸಿ ಬರುತ್ತಿದ್ದಾರೆ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶ್ರೀ ಚೈತನ್ಯ ವೀರ ಮಾರುತಿ ವ್ಯಾಯಾಮ ಶಾಲೆ, ಸಂತಕಟ್ಟೆ ಯಲ್ಲಿ
ಮುಲ್ಕಿ ಸೀಮೆ ಅರಸರಾದ ಶ್ರೀ ದುಗ್ಗಣ್ಣ ಸಾವಂತರ ಶುಭಾಶೀರ್ವಾದದೊಂದಿಗೆ ನೆರವೇರಿತು. ಈ ಸಂದರ್ಭದಲ್ಲಿ ಅರಮನೆಯ ಗೌತಮ್ ಜೈನ್, ವ್ಯಾಯಾಮ ಶಾಲೆಯ ಅರ್ಚಕ ಉಮೇಶ್ ಪೂಜಾರಿ, ಹಿರಿಯರಾದ ಮೋಹನ್ ಕುಂದರ್
ಗ್ರಾಮ ಪಂಚಾಯತಿ ಸದಸ್ಯರಾದ ದಿನೇಶ್ ಶೆಟ್ಟಿ ಪ್ರವೀಣ್ ಕುಮಾರ್ ಕೊಲ್ಲೂರು , ವರದರಾಜ ಕಾಂಚನ್, ಚಂದ್ರನಾಥ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.