ಮುಲ್ಕಿ: ಪರಿಸರದಲ್ಲಿ ವಿಜೃಂಭಣೆಯ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ
Wednesday, August 21, 2024
ಮುಲ್ಕಿ: ಪರಿಸರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170 ನೇ ಜಯಂತಿ ಆಚರಣೆ ವಿಜೃಂಭಣೆಯಿಂದ ನಡೆಯಿತು.
ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಬೆಳಿಗ್ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ ಪ್ರಯುಕ್ತ ವಿಶೇಷ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.
ಉಡುಪಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಉಮಾನಾಥ ಕೋಟ್ಯಾನ್ ಮತ್ತಿತರರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಸಂಜೆ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದ ಭವ್ಯ ಶೋಭಾಯಾತ್ರೆಯು ಸೇವಾದಾರರಾದ ಪುಷ್ಪಲತಾ ಕರುಣಾಕರ ಕೊಳಚಿಕಂಬಳ ರವರ ಮನೆಯಿಂದ ಮುಲ್ಕಿ ಬಿಲ್ಲವ ಸಂಘದವರೆಗೆ ವಿವಿಧ ಬಿರುದಾವಳಿಗಳೊಂದಿಗೆ ನಡೆಯಿತು
ಮುಲ್ಕಿ ಪರಿಸರದ ಹಳೆಯಂಗಡಿ, ಸಸಿಹಿತ್ಲು, ಕಿನ್ನಿಗೋಳಿ ತಾಳಿಪಾಡಿ, ಮಟ್ಟು, ಎಸ್ ಕೋಡಿ, ಪರಿಸರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ವಿಜೃಂಭಣೆಯಿಂದ ನಡೆದು ಶೋಭಾ ಯಾತ್ರೆ ನಡೆಯಿತು.
ಈ ಸಂದರ್ಭ ವಿವಿಧ ಸಂಘದ
ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.