ದೈಹಿಕ ಹಾಗು ಸ್ವಂತ ಸಾಮರ್ಥ್ಯದಿಂದ ಕ್ರೀಡೆಯಲ್ಲಿ ಸಾಧನೆ ಮಾಡಬಹುದು - ಪುಂಡಲೀಕ ಹೊಸಬೆಟ್ಟು. -.
Wednesday, August 21, 2024
ಸುರತ್ಕಲ್ :ಸಂಡೇ ಗಾಯ್ಸ್ ಸಂಸ್ಥೆಯು ಸುರತ್ಕಲ್ ವಿಧ್ಯಾದಾಯಿನಿ ಪ್ರೌಢ ಶಾಲೆಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ನಿಗದಿತ ಓವರ್ ಗಳ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಪುಂಡಲೀಕ ಹೊಸಬೆಟ್ಟು ಅವರು ಕ್ರಿಕೆಟ್ ಸಾಧನೆ ಮಾಡಲು ನುರಿತ ತರಬೇತುದಾರರ ಸಹಕಾರದಿಂದ ಕ್ರಿಕೆಟ್ ಪಟುಗಳು ತರಬೇತಿ ಪಡೆದು, ರಾಜ್ಯ, ರಾಷ್ಟ್ರ, ಮಟ್ಟದಲ್ಲಿ ಮಿಂಚಬಹುದು ಎಂದರು.
ಈ ಸಂದರ್ಭ ಸತ್ಯಜಿತ್ ಸುರತ್ಕಲ್, ವಿನಯ್ ಆಚಾರ್ಯ ಹೊಸಬೆಟ್ಟು, ಮಹಾಬಲ ಪೂಜಾರಿ ಕಡ೦ಬೋಡಿ, ಪ್ರತಿಭಾ ಕುಳಾಯಿ, ಲೋಕೇಶ್ ಕೋಡಿಕೆರೆ, ಸಂಡೇ ಗಯ್ಸ್ ತಂಡದ ಅಧ್ಯಕ್ಷ ಲಲಿತ್ ಪ್ರಸಾದ್, ಉಮೇಶ್ ಕೋಡಿಕಲ್ ಉಪಸ್ಥಿತರಿದ್ದರು. ಕ್ರೀಡೆಯಲ್ಲಿ ಸಾಧನೆ ಮಾಡಿದ ಅಂತಾರಾಷ್ಟ್ರೀಯ ಕ್ರೀಡಾಪಟು ವಿಜಯಕಾಂಚನ್ ಹೊಸಬೆಟ್ಟು, ರಾಷ್ಟ್ರೀಯ ಕ್ರೀಡಾಪಟು ಪುಂಡಲೀಕ ಹೊಸಬೆಟ್ಟು, ಕ್ಯಾಪ್ಟನ್ ಲಿಲಾಧರ್ ಕಡ0ಬೋಡಿ, ಜಾಗ್ವಾರ್ ತಂಡದ ಶರತ್ ಮಂಗಳಪೇಟೆ, ಸೌರವ್ ಗುಡ್ಡೆಕೊಪ್ಪಳ, ದಯಾನಂದ ಕೋಡಿಕಲ್, ಸುರೇಂದ್ರ ಕಡ೦ಬೋಡಿ, ಅವರನ್ನು ಈ ಸಂದರ್ಭ ಗೌರವಿಸಲಾಯಿತು. ಸ್ಟ್ರೈಕರ್ ಸುರತ್ಕಲ್ ತಂಡ ಪ್ರಥಮ ಬಹುಮಾನ ಪಡೆದರೆ, ಕರಾವಳಿ ಕಿಂಗ್ಸ್ ಅಗ್ಗದಕಳಿಯ ದ್ವಿತೀಯ ಬಹುಮಾನ ಪಡೆದುಕೊಂಡಿತು. ಕಾರ್ಯಕ್ರಮ ನಿರೂಪಣೆಯನ್ನು ವಿನಯ್ ಉದ್ಯಾವರ ನಿರ್ವಹಿಸಿದರು.