ರಾಜ್ಯ ದೈಹಿಕ ಶಿಕ್ಷಕರ ಸಂಘ ಮಂಗಳೂರು ಉತ್ತರ ವಲಯ ಅಧ್ಯಕ್ಷರಾಗಿ ನಿತಿನ್ ಆರ್. ಪುತ್ರನ್ ಆಯ್ಕೆ
Wednesday, August 21, 2024
ಮಂಗಳೂರು: ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮಂಗಳೂರು ಉತ್ತರ ವಲಯದ ಮಹಾಸಭೆಯು ಜಿಲ್ಲಾ ಸಂಘದ ಅಧ್ಯಕ್ಷರಾದ ಶ್ರೀಮತಿ ಲಿಲ್ಲಿ ಪಾಯ್ಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ 2024-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯ ಚುನಾವಣಾ ಪ್ರಕ್ರಿಯೆಯನ್ನು ಮೈಸೂರು ವಿಭಾಗ ಕಾರ್ಯಾಧ್ಯಕ್ಷ ತ್ಯಾಗಮ್ ಹರೇಕಳ ನಡೆಸಿಕೊಟ್ಟರು.ನೂತನ ಅಧ್ಯಕ್ಷರಾಗಿ ಚೇಳ್ಯಾರು ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಿತಿನ್ ಆರ್. ಪುತ್ರನ್ ಅವಿರೋಧವಾಗಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಹರೀಶ್ ರೈ,
ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್, ಕೋಶಾಧಿಕಾರಿಯಾಗಿ ಚೇತನ್ ಕುಮಾರ್, ಉಪಾಧ್ಯಕ್ಷರಾಗಿ ಪ್ರವೀಣ್ ವಿನ್ಸೆ0ಟ್ ಲೋಬೊ, ಚೆಲುವಮ್ಮ , ಸುಭಾಷಿಣಿ ಜೊತೆ ಕಾರ್ಯದರ್ಶಿಯಾಗಿ ಸುಜಿತ್ , ಉಮೇಶ್, ಸಂಘಟನಾ ಕಾರ್ಯದರ್ಶಿಯಾಗಿ ಯಶವಂತ ಮಾಡ, ಸುಮನ ಪ್ರಭು, ಉದಯ ನಾಯ್ಕ್, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಣೀತ್ ಹೆಗ್ಡೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿದ್ಯಾಲತಾ, ಪತ್ರಿಕಾ ಕಾರ್ಯದರ್ಶಿಯಾಗಿ ನಿನಾದ್ ಕುಮಾರ್ ,ಲೆಕ್ಕ ಪರಿಶೋಧಕರಾಗಿ ವಿನೋದ್ ಕುಮಾರ್ ಸೂರಿಂಜೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉದಯ ಕುಮಾರ್, ಅಕ್ಷತ, ಕೃಷ್ಣ, ನೋಯೆಲ್ ಮಿನೇಜಸ್, ಅರುಣ್ ಬ್ಯಾಫ್ಟಿಸ್ಟ್ , ಇಸ್ಮಾಯಿಲ್, ಸೀತಾಚಂದ್ರಿಕ, ನವೀನ ಕುಮಾರಿ, ಸಂತೋಷ್ ಮಸ್ಕರೇನಸ್, ಆಶಾ ಇವರುಗಳು ಆಯ್ಕೆ ಯಾದರು.