ಗುರುಪುರ ಗೋಳಿದಡಿಗುತ್ತಿನಲ್ಲಿ ರಕ್ಷಾ ಬಂಧನ
Wednesday, August 21, 2024
ಗುರುಪುರ :ಗುರುಪುರ ಗೋಳಿದಡಿಗುತ್ತಿನ ಚಾವಡಿಯಲ್ಲಿ ಪ್ರತಿ ವರ್ಷದಂತೆ ರಕ್ಷಾ ಬಂಧನ ನಡೆಯಿತು.ಗುತ್ತಿನ ಶ್ರೀ ವೈದ್ಯನಾಥ ಹಾಗೂ ಪರಿವಾರ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಎಲ್ಲರೂ ಪರಸ್ಪರ ರಕ್ಷೆ ಕಟ್ಟಿಕೊಂಡರು.
ಗುರುಪುರ ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರು ರಕ್ಷಾ ಬಂಧನದ ಮಹತ್ವದ ಬಗ್ಗೆ ತಿಳಿಸಿದರು.
ಈ ಸಂದರ್ಭ ಗುತ್ತಿನ ಚಾವಡಿ ಮಿತ್ರರು, ಗುತ್ತು ಮನೆತನಗಳ ಪ್ರಮುಖರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಗುತ್ತಿನ ಹಿತೈಷಿಗಳು ಉಪಸ್ಥಿತರಿದ್ದರು. ಸುನೀಲಾ ಪಿ. ಶೆಟ್ಟಿ ಸ್ವಾಗತಿಸಿ ವಂದಿಸಿದರು.