
ಮೂಲ್ಕಿ ತಾಲ್ಲೂಕು ಭೂ ನ್ಯಾಯ ಮಂಡಳಿಗೆ ಆಯ್ಕೆ
Thursday, August 22, 2024
ಮೂಲ್ಕಿ: ಮೂಲ್ಕಿ ತಾಲ್ಲೂಕು ಭೂ ನ್ಯಾಯ ಮಂಡಳಿಗೆ ರಾಜ್ಯ ಸರ್ಕಾರದಿಂದ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಸಹಾಯಕ ಆಯುಕ್ತರು ಮಂಗಳೂರು ಹಾಗೂ ಸದಸ್ಯರನ್ನಾಗಿ ಕಿಲ್ಪಾಡಿ ಗ್ರಾಮದ ಶಂಕರ್ ಪಡಂಗ, ಹಳೆಯಂಗಡಿ ಗ್ರಾಮದ ಬೊಳ್ಳೂರು ಫೌಝಿಯಾ, ಕಿನ್ನಿಗೋಳಿ ತಾಳಿಪ್ಪಾಡಿ ಯ ಫಿಲೋಮಿನಾ ಸಿಕ್ವೇರಾ, ನವೀನ್ ಸಾಲ್ಯಾನ್ ಪಂಜ, ಸದಸ್ಯ ಕಾರ್ಯದರ್ಶಿಯಾಗಿ ಮೂಲ್ಕಿ ತಾಲ್ಲೂಕು ತಹಶೀಲ್ದಾರ್ ರವರನ್ನು ನೇಮಕ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.
ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಮಾಜಿ ಸಚಿವ ಕೆ. ಅಭಯಚಂದ್ರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್ ಮತ್ತಿತರರು ಅಭಿನಂದಿಸಿದ್ದಾರೆ.