-->


ಕ್ಯಾಪ್ಸ್ ಸಂಸ್ಥೆಯಿಂದ ಮನೆಯ ವಾತಾವರಣದಲ್ಲಿ ಸಿಎ ಅಧ್ಯಯನ ಮಾಡುವ ವ್ಯವಸ್ಥೆ!

ಕ್ಯಾಪ್ಸ್ ಸಂಸ್ಥೆಯಿಂದ ಮನೆಯ ವಾತಾವರಣದಲ್ಲಿ ಸಿಎ ಅಧ್ಯಯನ ಮಾಡುವ ವ್ಯವಸ್ಥೆ!

ವಿಶೇಷ ವರದಿ:
ಕ್ಯಾಪ್ಸ್ ಸಂಸ್ಥೆಯು ಭಾರತದ ಅತ್ಯುನ್ನತ ಸಿಎ ಕೋಚಿಂಗ್ ಸೆಂಟರ್. ಕಾರಣವೇನು? ಕ್ಯಾಪ್ಸ್ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿ ಬಾರಿ ಸಿಎ ಪರೀಕ್ಷೆಯಲ್ಲಿ ಅಚ್ಚರಿಗೊಳಿಸುವ ಅಂಕಗಳೊಂದಿಗೆ ತೇರ್ಗಡೆ ಹೊಂದುತ್ತಿದ್ದಾರೆ, ವಿಶೇಷವಾಗಿ ಆನಲೈನ್ ಮೂಲಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು. ಕ್ಯಾಪ್ಸ್ ಸಂಸ್ಥೆಯು ಇದುವರೆಗೆ ಎರಡು ಸಾವಿರದ ಐನೂರಕ್ಕೂ ಹೆಚ್ಚಿನ ಸಿಎ ಗಳನ್ನು ತಯಾರು ಮಾಡಿದ್ದು, ನೂರಾ ಇಪ್ಪತ್ತೆಂಟಕ್ಕೂ ಹೆಚ್ಚು ರ್‍ಯಾಂಕ್ ಗಳನ್ನು ಪಡೆದಿದ್ದು, ಮೂರು ಬಾರಿ ಭಾರತಾದ್ಯಂತ ಮೊದಲನೇ ರ್‍ಯಾಂಕ್ ಪಡೆದ ಸಂಸ್ಥೆಯಾಗಿದೆ. 
ಕೆಲವು ಫಲಿತಾಂಶಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸ, ಆಶಯ ಹಾಗೂ ಸಿಎ ಪದವಿ ಗಳಿಸಬೇಕು ಎನ್ನುವ ಛಲವನ್ನು ತೋರಿಸುತ್ತದೆ. ಸಿಎ ಮಲೀಮ್ ಕೊಂಡಯ್ಯ ಎಸ್., ಮೂಲತಃ ಆಂಧ್ರ ಪ್ರದೇಶದ ಒಬ್ಬ ದೃಷ್ಟಿಹೀನ ವಿದ್ಯಾರ್ಥಿ, ಸಿಎ ಫೈನಲ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ ಹಾಗೂ ಮೆಹಕ್ ಫಾತೀಮಾ ಎಂಬ ವಿಕಲ ಚೇತನ  ವಿದ್ಯಾರ್ಥಿನಿ, ಸಿಎ ಇಂಟರ್ಮೀಡಿಯೆಟ್ ಪರೀಕ್ಷೆಯ ಎರಡು ಗ್ರೂಫಗಳಲ್ಲಿ ತೇರ್ಗಡೆ ಹೊಂದಿರುತ್ತಾರೆ. ಉಡುಪಿ, ಮಂಗಳೂರು ಹಾಗೂ ಶಿರಸಿ ಪ್ರದೇಶದ ಗ್ರಾಮೀಣ ವಿದ್ಯಾರ್ಥಿಗಳು ಸಿಎ ಶಿಕ್ಷಣವನ್ನು ತಮ್ಮ ಮನೆಗಳಲ್ಲೇ ಕಲಿತು ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.
ಸಾಧಕರ ಪಟ್ಟಿಯಲ್ಲಿ ಇಂಜಿನಿಯರ್ ಗಳಿಂದ ಹಿಡಿದು ವ್ಯಸ್ತ ಗೃಹಿಣಿಯರು ಇರುವುದು ಕ್ಯಾಪ್ಸ್ ಸಂಸ್ಥಾಪಕರಾದ ಸಿಎ ಚಂದ್ರಶೇಖರ ಶೆಟ್ಟಿ ಮುಂಡ್ಕೂರು ಅವರನ್ನು ಅಚ್ಚರಿಗೊಳಿಸಿದೆ. ನಮ್ಮ ಸಂಸ್ಥೆಯ ಮೂಲ ಉದ್ದೇಶ, " ಅತ್ಯಂತ ಕಡಿಮೆ ದರದಲ್ಲಿ ಸಿಎ ಶಿಕ್ಷಣವನ್ನು ಒದಗಿಸುವುದು" (ಇತರ ಶಿಕ್ಷಣ ಕೇಂದ್ರಗಳಿಗಿಂತ 33% ಕಡಿಮೆ ದರದಲ್ಲಿ ಹಾಗೂ ಇತರ ಕೇಂದ್ರಗಳಿಗಿಂತ ಮೂರು ಪಟ್ಟು ಹೆಚ್ಚಿನ ಗುಣಮಟ್ಟದೂಂದಿಗೆ).
2020 ನೇ ವರ್ಷದಿಂದ ಆನ್ ಲೈನ್ ಮೂಲಕ ಮನೆಯಲ್ಲೇ ಕುಳಿತು ಶಿಕ್ಷಣ ಪಡೆದುಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ ಎನ್ನುತ್ತಾರೆ ಚಂದ್ರಶೇಖರ ಶೆಟ್ಟಿ,
ಆನಲೈನ್ ತರಗತಿಗಳಿಂದ ಕೇವಲ ಸಮಯದ ಉಳಿತಾಯವಷ್ಟೇ ಅಲ್ಲ, ಊರಿಂದ ಬೇರೆ ಊರಿಗೆ ಸಿಎ ಕೋಚಿಂಗ್ ಗಾಗಿ ವಲಸೆ ಹೋಗುತ್ತಿದ್ದ ವಿದ್ಯಾರ್ಥಿಗಳ ಕಷ್ಟಕರ ಸಂಗತಿಯನ್ನು ದೂರ ಮಾಡಿದೆ. ವಿಷಯಗಳ ಮೂಲ ತತ್ವಗಳನ್ನು ಸಮಗ್ರವಾಗಿ ಅರ್ಥೈಸಿಕೊಳ್ಳಲು ಮಾಡುವ ಹಲವು ರಿವಿಜನ್ ಕ್ಲಾಸಗಳು ಸಹಾಯ ಮಾಡಿದೆ ಎಂಬ ವಿಚಾರವನ್ನು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾದ ಶೆಟ್ಟಿ ಸರ್ ವ್ಯಕ್ತಪಡಿಸುತ್ತಾರೆ. 
ಶೆಟ್ಟಿ ಸರ್ ಮಂಗಳೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕವನ್ನು ಪಡೆದಿದ್ದು, ಹಲವು ರಾಷ್ಟ್ರೀಯ ಮಟ್ಟದ ಪ್ರೊಫೆಷನಲ್ ಪರೀಕ್ಷೆಗಳಲ್ಲಿ ರ್‍ಯಾಂಕ್ ಪಡೆದಿರುತ್ತಾರೆ. ಇವರು ಹದಿನೈದಕ್ಕೂ ಹೆಚ್ಚು ಪದವಿಗಳನ್ನು ಹೊಂದಿದ್ದು, ಅವುಗಳಲ್ಲಿ ಸಿಎ, ಸಿಎಸ್, ಸಿಎಂಎ ಮತ್ತು ಎಂಎಸ್ಇ ಸೈಕಾಲಾಜಿಯನ್ನು ಹೊಂದಿರುತ್ತದೆ. ಈ ವರ್ಷವು ಕ್ಯಾಪ್ಸ್ ಸಂಸ್ಥೆಯ ರಜತ ಮಹೋತ್ಸವವಾಗಿದ್ದು " ಅತ್ಯಂತ ಕಡಿಮೆ ದರದಲ್ಲಿ ಉತ್ತಮವಾದ ಸಿಎ ಶಿಕ್ಷಣವನ್ನು ಭಾರತಾದ್ಯಂತ ಕೊಡುವುದು ಹಾಗೂ ಶಿಕ್ಷಣ ಎಲ್ಲ ವರ್ಗದವರಿಗೆ ತಲುಪಬೇಕು ಎಂಬುದು ಉದ್ದೇಶವಾಗಿರುತ್ತದೆ". 
ಕ್ಯಾಪ್ಸ್ ಸಂಸ್ಥೆಯ ಎಂಜಿಓ ಅಂಗವಾದ ಕ್ಯಾಪ್ಸ್ ಫೌಂಡೇಶನ್ ಕಳೆದ 17 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮವನ್ನು ಪೂರ್ಣಗೊಳಿಸಿದ್ದು ಪ್ರಪಂಚವನ್ನು ಸ್ವಚ್ಛ ಹಾಗೂ ಸುಂದರ ಸಮಾಜದ ನಿರ್ಮಾಣ ಕಾರ್ಯವನ್ನು ಮಾಡುತ್ತಿದೆ. ಕಟೀಲ್, ಕೋಟ ಹಾಗೂ ರಾಮಕುಂಜದಲ್ಲಿ ನಿರ್ಮಿಸಿರುವ ಹೊರಾಂಗಣ ವಿಜ್ಞಾನ ವನಗಳು ಇದಕ್ಕೆ ನಿದರ್ಶನವಾಗಿತ್ತದೆ. 
ಅತ್ಯಂತ ಕಡಿಮೆ ಉತ್ತೀರ್ಣ ಫಲಿತಾಂಶ ಹೊಂದಿರುವ ಸಿಎ ಕೋರ್ಸ್ ಕಷ್ಟಕರ ಇರಬಹುದು, ಆದರೆ ಕ್ಯಾಪ್ಸ್ ಸಂಸ್ಥೆಯ ಫಲಿತಾಂಶಗಳು ಯಾವುದೇ ವ್ಯಕ್ತಿಯು ಸಿಎ ಪರೀಕ್ಷೆಯಲ್ಲಿ ಸುಲಭವಾಗಿ ಉತ್ತೀರ್ಣರಾಗಬಹುದು ಎಂಬುವುದಕ್ಕೆ ನಿದರ್ಶನವಾಗಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article