ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್‌ನ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ
Tuesday, August 13, 2024
ಮೂಲ್ಕಿ:ಕೃಷಿ ಬದುಕನ್ನು ತೆರೆದಿಡುವ ಆಷಾಢ ಮಾಸದಲ್ಲಿನ ಮಹತ್ವವನ್ನು ಮುಂದಿನ ಪೀಳೆಗೆಯಾದ ಮಕ್ಕಳಲ್ಲಿ ತಿಳಿ ಹೇಳಿದಲ್ಲಿ ಆ ಪರಂಪರೆ, ಸಂಸ್ಕೃತಿ, ಉಳಿಯುವಂತಾಗುತ್ತದೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ಜನಪದ ಜೀವನ ಮರೆಯಾಗುತ್ತಿದೆ ಮೊಬೈಲ್ ದಾಸರಾಗುವತ್ತ ದಾಪುಗಾಲು ಇಡುತ್ತಿದ್ದೇವೆ ಇದು ಅಪಾಯದ ಸೂಚನೆ ಎಂದು ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್‌ನ ಸಂಸ್ಥಾಪಕ ಜಯಂತ್ ಅಮೀನ್ ಕೆರೆಕಾಡು ಹೇಳಿದರು.
ಅವರು ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್‌ನ ಸಂಯೋಜನೆಯಲ್ಲಿ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಯಕ್ಷಗಾನದ ಯುವ ಕಲಾವಿದರಾದ ಅಭಿಜಿತ್ ಮತ್ತು ದುರ್ಗಾಪ್ರಸಾದ್ ಆಟಿದ ಮದಿಪು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಧನಂಜಯ್ ಶೆಟ್ಟಿಗಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಶ್ವನಾಥ, ಶ್ರೇಯಸ್, ಫೌಂಡೇಶನ್‌ನ ಅಶೋಕ್. ಅಜಿತ್. ಲೋಹಿತ್. ನರೇಶ್, ಶಶಾಂಕ್. ಪ್ರೇಮಲತಾ, ರೇಷ್ಮಾ, ಅನ್ವಿತಾ, ಉಷಾ, ಯಶೋಧ. ಮಾಲತಿ ಮತ್ತಿತರರರು ವಿವಿಧ ಜವಬ್ದಾರಿಯನ್ನು ನಿರ್ವಹಿಸಿದರು.
ದಿವ್ಯಶ್ರೀ ತಡಂಬೈಲ್ ಸ್ವಾಗತಿಸಿದರು, ವಿಜೇತ ಶೆಟ್ಟಿ ವಂದಿಸಿದರು, ವಾಣಿ ಕಾರ್ಯಕ್ರಮ ನಿರೂಪಿಸಿದರು.