ಕಟೀಲು ನಂದಿನಿ ಬ್ರಾಹ್ಮಣ ಸಭಾ ವಾರ್ಷಿಕೋತ್ಸವ
Monday, August 12, 2024
ಕಟೀಲು : ಜಪತಪ ಅಧ್ಯಯನಗಳನ್ನು ಬಿಟ್ಟ ಕಾರಣ ಸಂಸ್ಕಾರಗಳನ್ನು ಅನುಸರಿಸದ ಪರಿಣಾಮ ಬ್ರಾಹ್ಮಣರು ಅಗೌರವಕ್ಕೊಳಗಾಗುತ್ತಿದ್ದಾರೆ ಎಂದು ವಿದ್ವಾಂಸ ಕಡಂದಲೆ ಸ್ಕಂದಪ್ರಸಾದ ಭಟ್ ಹೇಳಿದರು.
ಅವರು ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಂದಿನಿ ಬ್ರಾಹ್ಮಣ ಸಭಾದ ವಾರ್ಷಿಕೋತ್ಸದಲ್ಲಿ ಮಾತನಾಡಿದರು.
ವಿಶ್ವಾಮಿತ್ರ. ವ್ಯಾಸರು ಹೀಗೆ ಅನೇಕರು ಜಾತಿಯಿಂದ ಬ್ರಾಹ್ಮಣರಲ್ಲ. ಆದರೆ ಸಾಧನೆಯಿಂದ ಬ್ರಹ್ಮ ತೇಜೋ ಬಲಂ ಬಲಂ ಎಂದು ತೋರಿಸಿಕೊಟ್ಟರು. ಸಂಗೀತ ಸಾಹಿತ್ಯ ಇತ್ಯಾದಿ ಕಲಾಪ್ರಾಕಾರಗಳ ಕಲಿಕೆಯಿಂದ ಆಸಕ್ತಿಯಿಂದ ಗ್ರಂಥಗಳ ಅಧ್ಯಯನದಿಂದ ಸಂಸ್ಕಾರವಂತರಾಗಬೇಕು ಎಂದು ಸ್ಕಂದಪ್ರಸಾದ ಹೇಳಿದರು.
ವೇದವ್ಯಾಸ ಉಡುಪ ಮತ್ತು ಸುಧಾ ಉಡುಪ, ಅಜಾರು ನಾಗರಾಜ ರಾಯ ಮತ್ತು ಮನೋರಮಾ ಹಾಗೂ ರಾಜೇಂದ್ರ ಭಟ್ ಮತ್ತು ರುಕ್ಮಿಣಿ ದಂಪತಿಗಳನ್ನು ಗೌರವಿಸಲಾಯಿತು.
ಗಮಕ ಕಲೆಯಲ್ಲಿ ತೊಡಗಿಸಿಕೊಂಡಿರುವ ಅತ್ತೂರು ಸುರೇಶ್ ರಾವ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಸುಬ್ರಹ್ಮಣ್ಯಪ್ರಸಾದ್, ಪತ್ರಕರ್ತ ಮಿಥುನ್ ಇವರನ್ನು ಅಭಿನಂದಿಸಲಾಯಿತು.
ಕಟೀಲು ದೇಗುಲದ ಅರ್ಚಕ ಗೋಪಾಲಕೃಷ್ಣ ಆಸ್ರಣ್ಣ, ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಸುಬ್ರಹ್ಮಣ್ಯ ಪ್ರಸಾದ್ ಕೋರಿಯಾರ್, ನಂದಿನಿಬ್ರಾಹ್ಮಣ ಸಭಾ ಅಧ್ಯಕ್ಷ ಡಾ. ಪದ್ಮನಾಭ ಭಟ್. ರಾಮ್ ಗೋಪಾಲ್, ದೇವಿಪ್ರಕಾಶ್ ರಾವ್, ಜ್ಯೋತಿ ಉಡುಪ, ಶ್ರೀಶ ಆಚಾರ್ಯ ಮತ್ತಿತರರಿದ್ದರು.
ಮಲ್ಲಿಕಾ ರಾವ್. ಪ್ರಭಾಕರ ರಾವ್ ಹಾಗೂ ಸುಮಂಗಲಾ ಭಟ್ ಸಂಮಾನ ಪತ್ರ ವಾಚಿಸಿದರು.
ಗುರುಪ್ರಸಾದ್ ಭಟ್ ನಿರೂಪಿಸಿದರು. ಅನುಪಮಾ ವಂದಿಸಿದರು.