ಸೌೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್‌ನ ಮೂಲ್ಕಿ ವಲಯದ ಸಂಯೋಜನೆಯಲ್ಲಿ ಅಂಕಣದ ಹಬ್ಬ ಕ್ರೀಡಾ ಸ್ಪರ್ಧೆ
Monday, August 12, 2024
ಮೂಲ್ಕಿ: ಮೂಲ್ಕಿಯ ವಿಜಯ ಕಾಲೇಜಿನಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್‌ನ ಮೂಲ್ಕಿ ವಲಯದ ಸಂಯೋಜನೆಯಲ್ಲಿ ಭಾನುವಾರ ಅಂಕಣದ ಹಬ್ಬ ಕ್ರೀಡಾ ಸ್ಪರ್ಧೆಯನ್ನು ಎಸ್‌ಕೆಪಿಎಯ ಜಿಲ್ಲಾ ಅಧ್ಯಕ್ಷ ಪದ್ಮಪ್ರಸಾದ್ ಜೈನ್ ಚಾಲನೆ ನೀಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಅವರು ಕ್ರೀಡಾ ಸ್ಪರ್ಧೆಗೆ ಶುಭ ಹಾರೈಸಿದರು.
ಅಂಕಣದ ಹಬ್ಬದಲ್ಲಿ ತುಳುನಾಡಿನ ಜನಪದ ಚಿತ್ರಣವನ್ನು ಪ್ರದರ್ಶಿಸಲಾಗಿತ್ತು. ಹಳ್ಳಿಗಾಡಿನ ಕ್ರೀಡಗಳಾದ ಲಗೋರಿ, ಮಡಿಕೆ ಹೊಡೆಯುವುದು, ಕೋಣಗಳ ಓಟ, ಕ್ರಿಕೇಟ್, ನೀರಿನ ಕೊಡಪಾನದೊಂದಿಗೆ ಕಂಬದ ಮೇಲೆ ನಡೆಯುವುದು ಹೀಗೆ ವಿಭಿನ್ನ ಸ್ಪರ್ಧೆಗಳು ನಡೆದವು. ಎರಡೂ ಜಿಲ್ಲೆಯ ಎಂಟು ವಲಯದ ಸುಮಾರು ಐದು ನೂರು ಮಂದಿ ತಮ್ಮ ಕುಟುಂಬದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಮೂಲ್ಕಿ ಪೊಲೀಸ್ ಠಾಣೆಯ ಸುರೇಶ್ ಕುಂದರ್, ಕ್ರೀಡಾ ಸಂಘಟಕ ಗೌತಮ್ ಶೆಟ್ಟಿ, ವಿವಿಧ ಪ್ರಮುಖರಾದ ಕರುಣಾಕರ ಕಾನಂಗಿ, ದಯಾನಂದ್ ಬಂಟ್ವಾಳ, ವಾಸುದೇವರಾವ್, ನವೀನ್ ರೈ ಪಂಜಳ, ಪ್ರಕಾಶ್ ಸುವರ್ಣ ಮೂಲ್ಕಿ, ರಂಇತ್ ಮೆಂಡನ್, ಭಾರದ್ವಾಜ್, ಪ್ರಕಾಶ್ ಕೊಡ್ಮಣ್, ಯೋಗೀಶ್ ಪಾವಂಜೆ, ಹರೀಶ್ ಕೋಟ್ಯಾನ್ ಪಡುಪಣಂಬೂರು, ನಾಗರಾಜ್ ಪೂಜಾರಿ, ಕ್ರೀಡಾ ಕಾರ್ಯದರ್ಶಿ ಶಶಿಕಾಂತ್ ಮತ್ತಿತರರು ಇದ್ದರು.
-೦-